ಮಂಗೋಲಾ (ಕಾಂಗೋ): ಕಾಂಗೋ ನದಿಯಲ್ಲಿ ದೋಣಿ ಮಗುಚಿದ ಪರಿಣಾಮ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 60 ಮಂದಿ ನಾಪತ್ತೆಯಾಗಿದ್ದಾರೆ.
ಹಲವು ಶವಗಳನ್ನು ಹೊರಗೆ ತೆಗೆಯಲಾಗಿದ್ದು, ಇನ್ನೂ 60 ಜನ ನಾಪತ್ತೆಯಾಗಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದೆ. 39 ಜನರು ಸುರಕ್ಷಿತವಾಗಿದ್ದು, ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೋಣಿ ಹೊರಡುವಾಗ ಪ್ರಯಾಣಿಕರ ಸಂಖ್ಯೆಯನ್ನು ದಾಖಲು ಮಾಡಿರದ ಕಾರಣ ಸ್ಪಷ್ಟ ಸಂಖ್ಯೆ ಸಿಗುತ್ತಿಲ್ಲ. ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದ ಕಾರಣ ದೋಣಿ ಮಗುಚಿರುವ ಸಾಧ್ಯತೆಗಳಿವೆ.