ಸಿಡ್ನಿ: ನೀರಿನ ಬರ ಹಾಗೂ ಕಾಡ್ಗಿಚ್ಚಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ, ಇನ್ನೈದು ದಿನಗಳಲ್ಲಿ ಹತ್ತು ಸಾವಿರ ಒಂಟೆಗಳನ್ನು ಕೊಲ್ಲಲು ಮುಂದಾಗಿದೆ.
ಒಂಟೆಗಳ ಹತ್ಯೆ ಕಾರ್ಯ ಬುಧವಾರದಿಂದಲೇ ಆರಂಭವಾಗಿದ್ದು, ಇದಕ್ಕಾಗಿ ಸರ್ಕಾರ ವೃತ್ತಿಪರ ಶೂಟರ್ ಗಳನ್ನು ಬಳಸಿಕೊಳ್ಳುತ್ತಿದೆ. ಶೂಟರ್ ಗಳಿಗೆ ಹೆಲಿಕಾಪ್ಟರ್ ಗಳನ್ನೂ ಒದಗಿಸಿದೆ.
ದಕ್ಷಿಣ ಆಸ್ಟ್ರೇಲಿಯಾದ ಬೆಟ್ಟ ಪ್ರದೇಶಗಳಲ್ಲಿ ಒಂಟೆಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಂಟೆಗಳು ಹೆಚ್ಚು ನೀರು ಕುಡಿಯುವುದರಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಒಂಟೆಗಳು ಮನೆಗಳಲ್ಲಿ ಅಳವಡಿಸಲಾದ ಏರ್ ಕಂಡೀಷನ್ ಗಳ ನೀರನ್ನೂ ಕುಡಿಯುತ್ತಿವೆ. ಸುತ್ತಮುತ್ತ ಎಲ್ಲೇ ನೀರಿದ್ದರೂ ಅದನ್ನು ಖಾಲಿ ಮಾಡುತ್ತಿವೆ ಎಂದು ಹಲವರು ಸರ್ಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಒಂಟೆಗಳ ಹತ್ಯೆಗೆ ಮುಂದಾಗಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರದೇಶ ಸೇರಿ ಹಲವೆಡೆ ಬೆಂಕಿ ಜ್ವಾಲೆ ಅರಣ್ಯವನ್ನು, ಪ್ರಾಣಿಗಳನ್ನು, ಮನುಷ್ಯರನ್ನು ಬಲಿ ಪಡೆದಿದೆ. ಬೆಂಕಿ ನಂದಿಸಲು ಸಾಧ್ಯವಾಗದಷ್ಟು ಭೀಕರತೆ ಆವರಿಸಿದೆ.
10 ಸಾವಿರ ಒಂಟೆ ಹತ್ಯೆಗೆ ಆಸ್ಟ್ರೇಲಿಯಾ ನಿರ್ಧಾರ
Follow Us