ಸಿಡ್ನಿ: ವ್ಯಾಪಕವಾಗಿ ಹರಡುತ್ತಿರುವ ಬೆಂಕಿಯ ಕೆನ್ನಾಲಗೆಯಿಂದ ಆಸ್ಟ್ರೇಲಿಯಾ ತತ್ತರಿಸಿ ಹೋಗಿದ್ದು, ಇದೀಗ ಬೆಂಕಿ ಕ್ಯಾನ್ ಬೆರಾ ವಿಮಾನ ನಿಲ್ದಾಣಕ್ಕೂ ತಲುಪುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕ್ಯಾನ್ ಬೆರಾ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಎಲ್ಲ ವಿಧದ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಅಂತಾರಾಷ್ಟ್ರೀಯ ಸಮುದಾಯ ಬೆಂಕಿ ನಂದಿಸುವಲ್ಲಿ ಕೈ ಜೋಡಿಸಿದ್ದರೂ ಇದುವರೆಗೆ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ