newsics.com
ಬ್ರಸೆಲ್ಸ್; ಬ್ಯಾಕ್ಟೀರಿಯಾ ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತಗೊಂಡಿದೆ. ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಬೆಲ್ಜಿಯಂನ ವೈಜ್ ನಗರದಲ್ಲಿರುವ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ಚಾಕೋಲೇಟ್ ಫ್ಯಾಕ್ಟರಿ ಕಾರ್ಯ ಸ್ಥಗಿತಗೊಂಡಿದೆ.
ಮುಂದಿನ ಸೂಚನೆ ಬರುವವರೆಗೂ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಫ್ಯಾಕ್ಟರಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.