ಡೇರಾ ಬುಗ್ತಿ: ಪಾಕ್ ಸೇನಾ ಕ್ಯಾಂಪ್ ಮೇಲೆ ಬಲೂಚ್ ಸೇನೆ ದಾಳಿ ನಡೆಸಿದ್ದು 16 ಪಾಕ್ ಸೈನಿಕರು ಮೃತಪಟ್ಟಿದ್ದಾರೆ.
ಸಿಂಗ್ಸಿಲಾ ಪ್ರದೇಶದಲ್ಲಿರುವ ಪಾಕಿಸ್ತಾನದ ಸೇನಾ ಶಿಬಿರದ ಮೇಲೆ ಬಲೂಚಿಸ್ತಾನ ಲಿಬರೇಷನ್ ಫ್ರಂಟ್, ಬಲೂಚಿಸ್ತಾನ ರಿಪಬ್ಲಿಕನ್ ಗಾರ್ಡ್ ಹಾಗೂ ಸೇನೆ ಸೇರಿ ಒಟ್ಟಿಗೆ ದಾಳಿ ನಡೆಸಿವೆ.
ದಾಳಿ ವೇಳೆ ಸೇನಾ ಶಿಬಿರದಲ್ಲಿದ್ದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ಹೋರಾಟಗಾರರು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಹೋರಾಟಗಾರರ ಹೇಳಿಕೆ ಪ್ರಕಾರ, ದಾಳಿಯಲ್ಲಿ ಸೇನೆಗೆ ಸೇರಿದ ಎರಡು ವಾಹನಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಆದರೆ, ಪಾಕಿಸ್ತಾನ ಸೇನೆ ದಾಳಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಪಾಕ್ ಸೇನಾ ಕ್ಯಾಂಪ್ ಮೇಲೆ ಬಲೂಚ್ ಸೇನೆ ದಾಳಿ; 16 ಪಾಕ್ ಸೈನಿಕರ ಸಾವು
Follow Us