ದುಬೈ: ಭಾರತದ ಪೌರತ್ವ ತಿದ್ದುಪಡಿ ಕಾನೂನು ಕುರಿತಂತೆ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಇದೇ ಮೊದಲ ಬಾರಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುಬೈನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪೌರತ್ವ ಕಾನೂನು ಅನಗತ್ಯವಾಗಿದೆ. ಇದನ್ನು ಯಾಕಾಗಿ ಭಾರತ ಜಾರಿಗೆ ತಂದಿದೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಪೌರತ್ವ ಕಾನೂನು ಭಾರತದ ಆಂತರಿಕ ವಿಷಯವಾಗಿದೆ. ಇದರಿಂದ ಬಾಂಗ್ಲಾ ನಾಗರಿಕರಿಗೆ ಯಾವುದೇ ತೊಂದರೆಯಾಗದು ಎಂಬ ಭರವಸೆಯನ್ನು ಪ್ರಧಾನಿ ಮೋದಿ ವೈಯಕ್ತಿಕವಾಗಿ ನೀಡಿದ್ದಾರೆ ಎಂದು ಹಸೀನಾ ಸಂದರ್ಶನದಲ್ಲಿ ತಿಳಿಸಿದ್ದಾರೆ.