ವಾಷಿಂಗ್ಟನ್: ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ದಂತಕಥೆ ಕೋಬೆ ಬ್ರಯಾಂಟ್ ಹಾಗೂ ಅವರ 13 ವರ್ಷದ ಪುತ್ರಿ ಗಿಯಾನ್ನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆ.
ಲಾಸ್ ಏಂಜಲೀಸ್ ನಿಂದ ಸುಮಾರು 30 ಮೈಲಿ ದೂರದ ಕಲಾಬಾಸಾಸ್ ಸಮೀಪ ಹೆಲಿಕಾಪ್ಟರ್ ಪತನವಾಗಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ನಲ್ಲಿ ಕೋಬೆ, ಮಗಳು ಗಿಯಾನ್ನಾ ಹಾಗೂ ಇತರ ಎಂಟು ಮಂದಿ ಪ್ರಯಾಣಿಸುತ್ತಿದ್ದರು.
ಎಸ್.76 ಹೆಲಿಕಾಪ್ಟರ್ ದುರಂತ ಯಾವ ಕಾರಣದಿಂದ ಸಂಭವಿಸಿದೆ ಎಂದು ತಿಳಿದುಬಂದಿಲ್ಲ.
41 ವರ್ಷದ ಕೋಬೆ ಬ್ರಯಾಂಟ್ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಐದು ಬಾರಿ ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಚಾಂಪಿಯನ್ ಶಿಪ್ ಪಡೆದ ಕೀರ್ತಿಗೆ ಭಾಜನರಾಗಿದ್ದರು. 2018ರಲ್ಲಿ ಬ್ರಯಾಂಟ್ ನಿವೃತ್ತಿ ಘೋಷಿಸಿದ್ದರು.
ಬಾಸ್ಕೆಟ್ ಬಾಲ್ ದಂತಕತೆ ಕೋಬೆ ಇನ್ನಿಲ್ಲ
Follow Us