Newsics.com
ವಾಷಿಂಗ್ಟನ್: ಅಮೆರಿಕದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಮತ ಎಣಿಕೆ ನಿರ್ಣಾಯಕ ಹಂತ ತಲುಪಿದೆ. ಇದರ ಜತೆ ಜತೆಗೆ ಕಾನೂನು ಸಮರಕ್ಕೆ ಕೂಡ ಚಾಲನೆ ನೀಡಲಾಗಿದೆ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಕೂಡ ದಾವೆ ಹೂಡುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಇತ್ತೀಚಿನ ಮಾಹಿತಿ ಪ್ರಕಾರ ಬಿಡೆನ್ 253 ಇಲೆಕ್ಟ್ರೋರಲ್ ಮತ ಪಡೆದಿದ್ದಾರೆ. ಟ್ರಂಪ್ 213 ಮತ ಗಳಿಸಿದ್ದಾರೆ. ಮ್ಯಾಜಿಕ್ ನಂಬರ್ 270.
ಡೆಮಾಕ್ರಟ್ ಅಭ್ಯರ್ಥಿ ಬಿಡೆನ್ ಅರಿಜೋನಾ ಮತ್ತು ನೆವಾಡ ಪ್ರಾಂತ್ಯದಲ್ಲಿ ಮುನ್ನಡೆಯಲ್ಲಿದ್ದಾರೆ. ಇಲ್ಲಿ ಬಿಡೆನ್ ಜಯಗಳಿಸಿದರೆ ಅಮೆರಿಕದ ನೂತನ ಅಧ್ಯಕ್ಷರಾಗಲಿದ್ದಾರೆ