ವಾಷಿಂಗ್ಟನ್: ಸದ್ಯದಲ್ಲೇ ನಿಮಗೆ ಬಿಗ್ ಬಿ ಅಮಿತಾಭ್ ಬಚ್ಚನ್ ‘ಮಾರ್ಗ’ದರ್ಶನ ಮಾಡಲಿದ್ದಾರೆ!
ಹೌದು, ಗೂಗಲ್ ಕಂಪನಿಯು ತನ್ನ ವಿಶ್ವವಿಖ್ಯಾತ ಅಪ್ಲಿಕೇಷನ್ ಗೂಗಲ್ ಮ್ಯಾಪ್’ನ ವಾಯ್ಸ ನೇವಿಗೇಟರ್’ನ ಹಿಂದಿ ಆವೃತ್ತಿಯನ್ನು ಹೊರತರಲು ನಿರ್ಧರಿಸಿದೆ. ಅದಕ್ಕೆ ಅಮಿತಾಭ್ ಬಚ್ಚನ್ ಅವರ ಧ್ವನಿ ಬಳಸಿಕೊಳ್ಳಲು ಮುಂದಾಗಿದೆ.
ಪ್ರಸ್ತುತ, ಭಾರತದಲ್ಲಿ ನೇವಿಗೇಟರ್ನ ಇಂಗ್ಲೀಷ್ ಆವೃತ್ತಿ ಬಳಕೆಯಲ್ಲಿದ್ದು, ಅದರಲ್ಲಿ ಅಮೆರಿಕದ ಹಾಡುಗಾರ್ತಿ ಕರೆನ್ ಜಾಕೋಬೆನ್ ಅವರ ಧ್ವನಿ ಬಳಸಿಕೊಳ್ಳಲಾಗಿದೆ. ಇದರ ಹಿಂದಿ ಆವೃತ್ತಿಗೆ ಅಮಿತಾಭ್ ಬಚ್ಚನ್ ಅವರ ಧ್ವನಿಯಿರಲಿ ಎಂದು ಕಂಪನಿ ಬಯಸಿದೆ. ಈಗಾಗಲೇ ಬಿಗ್ ಬಿ ಅವರನ್ನು ಈ ಬಗ್ಗೆ ಸಂಪರ್ಕಿಸಲಾಗಿದೆಯಾದರೂ ಬಚ್ಚನ್ ಅವರಿಂದ ಇನ್ನೂ ಸಮ್ಮತಿ ಸಿಕ್ಕಿಲ್ಲ. ಆದರೆ, ಅವರ ಧ್ವನಿಯನ್ನೇ ಬಳಸಿಕೊಳ್ಳುವ ಒತ್ತಾಸೆಯಲ್ಲಿರುವ ಕಂಪನಿ, ಅವರಿಗೆ ದುಬಾರಿ ಸಂಭಾವನೆಯನ್ನೂ ಆಫರ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.