ಮೊನಾಕೋ: ಬಿಲ್ ಗೇಟ್ಸ್ ವಿಲಾಸಿ ವಿಹಾರ ನೌಕೆಯೊಂದನ್ನು ಖರೀದಿಸಿದ್ದು, ಡಚ್ ಕಂಪನಿ ಸೈನೊಟ್ ಈ ಹಡಗನ್ನು ನಿರ್ಮಾಣ ಮಾಡಿದೆ.
ಜಲಜನಕದಿಂದಲೇ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಹಡಗು ನಿರ್ಮಾಣದಲ್ಲಿ ಸೈನೊಟ್ ತೊಡಗಿಕೊಂಡಿದೆ. ಗರಿಷ್ಠ ಅಂದರೆ 17 ನಾಟ್ಸ್ ವೇಗದಲ್ಲಿ ಕಾರ್ಯನಿರ್ವಹಿಸುವ ಇದು, ಗರಿಷ್ಠ 3,750 ನಾಟಿಕಲ್ ಮೈಲುಗಳ ತನಕ ಸಾಗಬಹುದು.
ಇದು 112 ಮೀಟರ್ ಉದ್ದ ಇದೆ. ಈ ಹಡಗಿನಲ್ಲಿ ಐದು ಡೆಕ್ ಗಳಿವೆ. ಹದಿನಾಲ್ಕು ಅತಿಥಿಗಳಿಗೆ ಮತ್ತು ಮೂವತ್ತೊಂದು ಸಿಬ್ಬಂದಿಗೆ ಇಲ್ಲಿ ಎಲ್ಲ ವ್ಯವಸ್ಥೆ ಮಾಡಬಹುದಾಗಿದೆ. ಒಳಾಂಗಣದ ಆರೋಗ್ಯ ಕೇಂದ್ರ, ಜಿಮ್, ಹೈಡ್ರೋ ಮಸಾಜ್ ರೂಮ್ ಮತ್ತು ಯೋಗ ಸ್ಟುಡಿಯೋ ಇದೆ. ಹೆಲಿಪ್ಯಾಡ್, ಸ್ಪಾ, ಒಳಾಂಗಣ ಕೊಳ ಸಹ ಇವೆ.
ವಿಲಾಸಿ ವಿಹಾರ ನೌಕೆ ಖರೀದಿಸಿದ ಬಿಲ್ ಗೇಟ್ಸ್
Follow Us