ದಾಮಸ್ಕಸ್: ಬಾಂಬ್ ದಾಳಿ, ಸೇನೆ ಮತ್ತು ಉಗ್ರರ ನಡುವಿನ ಕಾದಾಟ ಸಿರಿಯಾದಲ್ಲಿ ಮಾಮೂಲಿ.
ಇಲ್ಲಿನ ಜನ ಪ್ರತಿಕ್ಷಣವೂ ಭಯದಲ್ಲೇ ಜೀವನ ಸಾಗಿಸುತ್ತಾರೆ. ನಾಲ್ಕು ವರ್ಷದ ಮಗಳನ್ನು ಬಾಂಬ್ ಸ್ಫೋಟದ ಸದ್ದಿನಿಂದ ರಕ್ಷಿಸುವುದಕ್ಕೆ ತಂದೆ ಬಳಸಿರುವ ತಂತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಬಾಂಬ್ ಸ್ಫೋಟವಾದಾಗಲೆಲ್ಲ ನಗಬೇಕೆಂದು ಮಗಳು ಸೆಲ್ವಾಗೆ ಹೇಳಿಕೊಟ್ಟಿರುವ ತಂದೆ ಮಗಳನ್ನು ಭಯದಿಂದ ದೂರ ಮಾಡಿದ್ದಾರೆ. ಈಗ ಬಾಂಬ್ ಸ್ಫೋಟದ ಸದ್ದು ಕೇಳುತ್ತಿದ್ದಂತೆ ಮಗು ಭಯದಿಂದ ಅಳುವುದಿಲ್ಲ, ಬದಲಿಗೆ ಜೋರಾಗಿ ನಗುತ್ತದೆ. ಬಾಂಬ್ ಸದ್ದು ಕೇಳಿದಾಕ್ಷಣ ನಗುವುದೇ ಒಂದು ಬಗೆಯ ಆಟ ಎಂದು ಮಗುವಿಗೆ ಸ್ವತಃ ತಂದೆಯೇ ಪಾಠ ಮಾಡಿದ್ದಾರೆ. ಹೀಗೆ ನಕ್ಕಾಗ ಸ್ಫೋಟದ ಸದ್ದಿನ ಭಯ ಇಲ್ಲದಂತಾಗುತ್ತದೆಂಬುದು ಸಿರಿಯಾದ ಸ್ಟ್ರಿಫ್ ಟೊರ್ನ್ ಪ್ರದೇಶದಲ್ಲಿರುವ ಅಬ್ದುಲ್ಲಾ-ಅಲ್-ಮೊಹಮ್ಮದ್ ಅವರ ಅಭಿಪ್ರಾಯ.
ತಂದೆ ಮತ್ತು ಮಗು ಸ್ಫೋಟದ ಬೆನ್ನಲ್ಲೇ ನಗುತ್ತಿರುವ ವಿಡಿಯೋವನ್ನು ಪತ್ರಕರ್ತ ಮೆಲ್ಮತ್ ಅಲ್ಗನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.
ಬಾಂಬ್ ಸ್ಫೋಟದ ಸದ್ದು ಕೇಳಿದಾಕ್ಷಣ ನಗುವ ಮಗು!
Follow Us