Wednesday, July 6, 2022

ಟ್ರಂಪ್’ರನ್ನು ‘ಅಹಂಕಾರಿ, ಅಜ್ಞಾನಿ’ ಎಂದ ಪುಸ್ತಕ ದಾಖಲೆ ಮಾರಾಟ!

Follow Us

♦ ಟ್ರಂಪ್ ಅಣ್ಣನ ಮಗಳೇ ಬರೆದ ಪುಸ್ತಕಕ್ಕೆ ಭಾರೀ ಡಿಮಾಂಡ್

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆವರನ್ನು ಅಹಂಕಾರಿ ಹಾಗೂ ಅಜ್ಞಾನಿ ಎಂದು ಬಿಂಬಿಸಿರುವ ಪುಸ್ತಕವೊಂದು ದಾಖಲೆ ಮಾರಾಟ ಕಂಡಿದೆ. ಆದರೆ, ಈ ಪುಸ್ತಕವು ಸುಳ್ಳುಗಳ ಸರಮಾಲೆ ಎಂದು ಅಮೆರಿಕ ಅಧ್ಯಕ್ಷರ ಶ್ವೇತಭವನ ಹೇಳಿದೆ.
ಪುಸ್ತಕ ಬಿಡುಗಡೆಯಾದ ಮೊದಲ ದಿನವೇ 9.5 ಲಕ್ಷ ಪ್ರತಿಗಳು ಮಾರಾಟವಾಗಿವೆ ಎಂದು ಪುಸ್ತಕದ ಪ್ರಕಾಶಕರು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಬಗ್ಗೆ ಅವರ ಅಣ್ಣನ ಮಗಳು ಬರೆದ ಪುಸ್ತಕ ‘ಟೂ ಮಚ್ ಆಯಂಡ್ ನೆವರ್ ಇನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟಡ್ ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ ದಾಖಲೆಯ ಮಾರಾಟವಾಗಿದೆ.

ಅಮೆರಿಕದ ಸ್ವಾತಂತ್ರ್ಯ ಪದಕ ಪುರಸ್ಕೃತ ವಿವಿಯನ್ ನಿಧನ

ಡೊನಾಲ್ಡ್ ಟ್ರಂಪ್ ಆವರ ಹಿರಿಯಣ್ಣ ಫ್ರೆಡ್ ಟ್ರಂಪ್ ಅವರ ಮಗಳು ಮೇರಿ ಟ್ರಂಪ್ ಈ ಪುಸ್ತಕ ಬರೆದಿದ್ದಾರೆ. ಮುಂಚಿನ ಬೇಡಿಕೆಗಳು ಹಾಗೂ ಆಡಿಯೊ ಮತ್ತು ಡಿಜಿಟಲ್ ರೂಪಗಳು ಸೇರಿದಂತೆ 9,50,000 ಪ್ರತಿಗಳು ಪುಸ್ತಕ ಬಿಡುಗಡೆಯಾದ ಮೊದಲ ದಿನ ಅಂದರೆ ಮಂಗಳವಾರ ಮಾರಾಟವಾಗಿವೆ ಎಂದು ಈ ಪುಸ್ತಕ ಪ್ರಕಟಿಸಿರುವ ಸೈಮನ್ ಅಂಡ್ ಶಸ್ಟರ್ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಹೆಚ್ಚಿನ ಪ್ರತಿಗಳ ಮುದ್ರಣಕ್ಕಾಗಿ ಸೈಮನ್ ಅಂಡ್ ಶಸ್ಟರ್ ಬೇಡಿಕೆ ಸಲ್ಲಿಸಿದೆ. ಅಮೆರಿಕದ ಮಾರುಕಟ್ಟೆಯೊಂದಕ್ಕೇ 11.5 ಲಕ್ಷ ಪ್ರತಿಗಳನ್ನು ಅದು ಮೀಸಲಿರಿಸಿದೆ. ಆನ್ಲೈನ್ ಮಾರಾಟ ಕಂಪನಿ ಅಮೆಜಾನ್ ನ ಕೆನಡ ಮತ್ತು ಆಸ್ಟ್ರೇಲಿಯಗಳ ಮಾರಾಟ ಪಟ್ಟಿಯಲ್ಲಿಯೂ ಈ ಪುಸ್ತಕ ಮೊದಲ ಸ್ಥಾನದಲ್ಲಿದೆ.

ಮತ್ತಷ್ಟು ಸುದ್ದಿಗಳು

vertical

Latest News

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...

ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕ ಸ್ಫೋಟ: ಇಬ್ಬರು ಸೈನಿಕರಿಗೆ ಗಂಭೀರ ಗಾಯ

newsics.com ಶ್ರೀನಗರ: ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕವಾಗಿ ಸ್ಫೋಟವಾದ ಹಿನ್ನೆಲೆ ಇಬ್ಬರು ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಪೂಂಚ್ ಜಿಲ್ಲೆಯ ಜುಲ್ಲಾಸ್ ಪ್ರದೇಶದಲ್ಲಿ ಸೈನಿಕರು ಫೈರಿಂಗ್...
- Advertisement -
error: Content is protected !!