Saturday, April 17, 2021

ಚೀನಾ ಅತಿಕ್ರಮಣ: ಇಂದು ಹಿರಿಯ ಸೇನಾಧಿಕಾರಿಗಳ ಚರ್ಚೆ

ಬೀಜೀಂಗ್: ಭಾರತ ಮತ್ತು ಚೀನಾ ಮಧ್ಯೆ ಲಡಾಕ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆ ಬಳಿ  ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಬಗೆಹರಿಸುವ ಸಂಬಂಧ ಇಂದು ಉನ್ನತ ಮಟ್ಟದ ಮಾತುಕತೆ ನಡೆಯಲಿದೆ. ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳು ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಭಾರತದ ಪರವಾಗಿ  14ನೇ ಸೇನಾ ದಳದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.  ಮೇಜರ್ ಜನರಲ್  ಲಿಯೂ ಲಿನ್ ಚೀನಾವನ್ನು ಪ್ರತಿನಿಧಿಸಲಿದ್ದು, ಚೀನಾದ ಮೋಲಾಡೊದಲ್ಲಿ ಮಾತುಕತೆ ನಡೆಯಲಿದೆ. ಪ್ರಸಕ್ತ ತಲೆದೋರಿರುವ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸುವ ವಿಶ್ವಾಸವನ್ನು ಉಭಯ ರಾಷ್ಟ್ರಗಳು ಈಗಾಗಲೇ ವ್ಯಕ್ತಪಡಿಸಿವೆ. ಪನಗೋಂಗ್, ಗಲ್ವಾನ್ ಕಣಿವೆ ಮತ್ತು ಡೆಮ್ ಚೋಕ್ ಪ್ರದೇಶದಲ್ಲಿ ಚೀನಾದ ಚಟುವಟಿಕೆ ಬಗ್ಗೆ ಮಾತುಕತೆಯಲ್ಲಿ ಭಾರತ ಪ್ರಮುಖವಾಗಿ ಪ್ರಸ್ತಾಪಿಸಲಿದೆ. ದೇಶದ ಸಾರ್ವಭೌಮತ್ವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಚೀನಾಕ್ಕೆ ರವಾನಿಸಿದ ಬಳಿಕ, ಬೀಜಿಂಗ್ ಮಾತುಕತೆಗೆ ಮುಂದಾಗಿದೆ

ಮತ್ತಷ್ಟು ಸುದ್ದಿಗಳು

Latest News

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...
- Advertisement -
error: Content is protected !!