newsics.com
ಬಾಕ್ಸಿಂಗ್ ರಿಂಗ್ನಲ್ಲಿ ಸೆಣೆಸಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಬಾಕ್ಸರ್ ಮೂಸಾ ಯಮಕ್ ಸಾವನ್ನಪ್ಪಿದ್ದಾರೆ.ಮೃತ ಮೂಸಾ ಯಮಕ್ಗೆ 38 ವರ್ಷ ವಯಸ್ಸಾಗಿತ್ತು.
ಜರ್ಮನಿಯಲ್ಲಿ ವಾಸವಿದ್ದ ಮೂಸಾ 12 ವರ್ಷ ಪ್ರಾಯದವನಿದ್ದಾಗಲೇ ಬಾಕ್ಸಿಂಗ್ ತರಬೇತಿ ಪಡೆಯಲು ಆರಂಭಿಸಿದ್ದರು. 75 ಪಂದ್ಯಗಳಲ್ಲಿ ಆಡಿರುವ ಮೂಸಾ ಯಮಕ್ ಸೋಲಿಲ್ಲದ ಸರದಾರ ಎಂಬ ಕೀರ್ತಿಯನ್ನು ಗಳಿಸಿದ್ದರು.
ಜರ್ಮನಿಯ ಮ್ಯೂನಿಚ್ನಲ್ಲಿ 84+ ಕೆಜಿ ಬಾಕ್ಸಿಂಗ್ ಪಂದ್ಯದ ಮೂರನೇ ಸುತ್ತಿನಲ್ಲಿ ಎದುರಾಳಿಯನ್ನು ಎದುರಿಸುತ್ತಿದ್ದ ವೇಳೆಯಲ್ಲಿ ಹೃದಯಾಘಾತಕ್ಕೆ ಒಳಗಾದ ಮೂಸಾ ಯಮಕ್ ಸಾವನ್ನಪ್ಪಿದ್ದಾರೆ.