newsics.com
ಮಾಸ್ಕೋ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ.
ಸಾವನ್ನಪ್ಪಿರುವ ರೂಪದರ್ಶಿಯನ್ನು ಬ್ರೆಜಿಲ್ ನ ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ.
ಥಾಲಿತಾ ಉಕ್ರೇನ್ ಪರವಾಗಿ ಹೋರಾಟ ಮಾಡುತ್ತಿದ್ದರು. ಬಂದೂಕು ಬಳಕೆಯಲ್ಲಿ ಪರಿಣಿತಿ ಪಡೆದಿದ್ದರು.
ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇದೀಗ ಥಾಲಿತಾ ಸಾವನ್ನಪ್ಪಿದ್ದಾರೆ. ಈ ಹಿಂದೆ ಥಾಲಿತಾ ಇರಾಕ್ ನಲ್ಲಿ ಐಸಿಸ್ ಉಗ್ರರ ವಿರುದ್ದ ಹೋರಾಟ ಮಾಡಿದ್ದರು.
ವಿಶ್ವದಾದ್ಯಂತ ಮಾನವೀಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.