ನ್ಯೂಯಾರ್ಕ್: ಕೊರೋನಾ ಸೋಂಕಿತರ ಪಟ್ಟಿಯಲ್ಲಿ ವಿಶ್ವದಲ್ಲಿ ಎರಡನೆ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ , ಅಲ್ಲಿನ ಅಧ್ಯಕ್ಷರೇ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜಯರ್ ಬೋಲ್ಸೋ ನಾರೋ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಕೊರೋನಾ ಸೋಂಕಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷರಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಕೆಲವು ಸಂದರ್ಭದಲ್ಲಿ ಅಧ್ಯಕ್ಷ ನಾರೋ ಕೊರೋನಾ ಮಾಸ್ಕ್ ಧರಿಸಿರಲಿಲ್ಲ.
ಅಮೆರಿಕದ ಬಳಿಕ ವಿಶ್ವದಲ್ಲಿ ಅತೀ ಹೆಚ್ಚು ಕೊರೋನಾ ಸೋಂಕಿತರಿರುವ ದೇಶ ಬ್ರೆಜಿಲ್. ಕೊರೋನಾ ಬ್ರೆಜಿಲ್ ನಲ್ಲಿ ಈಗಾಗಲೇ 65, 556 ಮಂದಿಯನ್ನು ಬಲಿಪಡೆದುಕೊಂಡಿದೆ.