ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷ ಜಯರ್ ಬೊಲ್ ಸೋನಾರೋ ಮತ್ತೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಎರಡನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ಕೂಡ ಪಾಸಿಟಿವ್ ವರದಿ ಬಂದಿದೆ. ಮಂಗಳವಾರ ಈ ಪರೀಕ್ಷೆ ನಡೆಸಲಾಗಿತ್ತು. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷ ಜಯರ್ ಬೊಲ್ ಅವರೇ ಇದನ್ನು ಖಚಿತಪಡಿಸಿದ್ದಾರೆ.
ನಾನೀಗ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇಲ್ಲಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಒಂದು ವಾರದ ಹಿಂದೆ ಮೊದಲ ಬಾರಿಗೆ ಕೊರೋನಾ ಸೋಂಕಿನ ಲಕ್ಷಣ ಬೊಲ್ ಸೋನಾರೋ ಅವರಲ್ಲಿ ಧೃಢಪಟ್ಟಿತ್ತು.
ಜುಲೈ 7ರಿಂದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಇದ್ದೇನೆ. ನನಗೆ ಕೊರೋನಾ ಸೋಂಕಿನ ಯಾವುದೇ ರೋಗ ಲಕ್ಷಣ ಬಹಿರಂಗವಾಗಿ ಕಂಡು ಬಂದಿಲ್ಲ ಎಂದು ಬೊಲ್ ಸೋನಾರೋ ಹೇಳಿದ್ದಾರೆ.
ಕೊರೋನಾ ಮಹಾ ಮಾರಿಯ ಮಧ್ಯೆ ಕೂಡ ನಿರ್ಬಂಧಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸಮಾರಂಭಗಳಲ್ಲಿ ಬ್ರೆಜಿಲ್ ಅಧ್ಯಕ್ಷರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಸ್ಕ್ ಕೂಡ ಧರಿಸಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು