ಬ್ರೆಸೀಲಿಯ (ಬ್ರೆಝಿಲ್): ಬ್ರೆಝಿಲ್ ಅಧ್ಯಕ್ಷರು ಮೂರನೇ ಬಾರಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.
ಅಧ್ಯಕ್ಷ ಜೈರ್ ಬೊಲ್ಸೊನಾರೊ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅಧ್ಯಕ್ಷರ ವೈದ್ಯಕೀಯ ತಂಡ ಅವರನ್ನು ನೋಡಿಕೊಳ್ಳುತ್ತಿದೆ ಎಂದು ಸಂಪರ್ಕ ಸಚಿವಾಲಯದ ಹೇಳಿಕೆ ತಿಳಿಸಿದೆ.
ಜುಲೈ 7ರಂದು ಜೈರ್ ಬೊಲ್ಸೊನಾರೊ ಅವರಲ್ಲಿ ಕೊರೋನಾ ವೈರಸ್ ಸೋಂಕು ಇರುವುದು ಮೊದಲ ಬಾರಿಗೆ ಪತ್ತೆಯಾಗಿತ್ತು.
ಅಧ್ಯಕ್ಷರನ್ನು ಮಂಗಳವಾರ ಇನ್ನೊಮ್ಮೆ ಕೊರೋನಾ ಸೋಂಕು ಪರೀಕ್ಷೆಗೆ ಗುರಿಪಡಿಸಲಾಯಿತು. ಆಗ ಅವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ” ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಮೂರನೇ ಬಾರಿ ಕೊರೋನಾ ಸೋಂಕಿಗೆ ಒಳಗಾದ ಬ್ರೆಝಿಲ್ ಅಧ್ಯಕ್ಷ
Follow Us