newsics.com
ಲಂಡನ್: ಬ್ರಿಟನ್ ವಿರುದ್ಧದ ಲಸಿಕೆ ಸಮರದಲ್ಲಿ ಭಾರತ ಭಾರಿ ರಾಜತಾಂತ್ರಿಕ ಯಶಸ್ಸುಗಳಿಸಿದೆ. ಭಾರತದಿಂದ ಬರುವ ಪ್ರವಾಸಿಗರು ಕಡ್ಡಾಯವಾಗಿ 10 ದಿನ ಕ್ವಾರಂಟೈನ್ ಗೆ ಒಳಪಡಬೇಕು ಎಂಬ ನಿಯಮವನ್ನು ಬ್ರಿಟನ್ ರದ್ದುಪಡಿಸಿದೆ. ಅಕ್ಟೋಬರ್ 11ರಿಂದ ಇದು ಜಾರಿಗೆ ಬರಲಿದೆ.
ಬ್ರಿಟನ್ ಗೆ ಆಗಮಿಸುವ ಭಾರತೀಯರು ಎರಡು ಡೋಸ್ ಕೊರೋನಾ ಲಸಿಕೆ ಪಡೆದಿದ್ದರೆ ಕ್ವಾರಂಟೈನ್ ಅಗತ್ಯ ಇಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ.
ಬ್ರಿಟನ್ ಕ್ವಾರಂಟೈನ್ ಹೇರಿದ್ದಕ್ಕೆ ಪ್ರತಿಯಾಗಿ ಭಾರತ ಕೂಡ ಅದೇ ನಾಣ್ಯದಲ್ಲಿ ಉತ್ತರ ನೀಡಿತ್ತು. ಭಾರತಕ್ಕೆ ಭೇಟಿ ನೀಡುವ ಬ್ರಿಟನ್ ನಾಗರಿಕರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗ ಬೇಕು ಎಂದು ಸೂಚಿಸಿತ್ತು.