newsics.com
ಲಂಡನ್: ಬ್ರಿಟನ್ ಮಾರಕ ಕೊರೋನಾದ ಎರಡನೆ ಅಲೆ ಎದುರಿಸಲಿದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಠಿಣ ನಿರ್ಬಂಧ ಕ್ರಮ ಜಾರಿಗೆ ಬರುವ ಮುನ್ಸೂಚನೆಯನ್ನು ಬ್ರಿಟನ್ ಪ್ರಧಾನಿ ನೀಡಿದ್ದಾರೆ
ಬ್ರಿಟನ್ ಮಾರಕ ಕೊರೋನಾದಿಂದ ಈಗಾಗಲೇ ತತ್ತರಿಸಿದೆ. ಹಲವು ತಿಂಗಳ ಲಾಕ್ ಡೌನ್ ಬಳಿಕ ದೇಶದಲ್ಲಿ ಆರ್ಥಿಕ ಚಟುವಟಿಕೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಕೊರೋನಾ ಎರಡನೆ ಅಲೆ ಭೀತಿ ಎದುರಾಗಿದೆ.