ಕಂದಕಕ್ಕೆ ಉರುಳಿದ ಬಸ್: 27 ಪ್ರಯಾಣಿಕರ ಸಾವು, 13 ಮಂದಿಗೆ ಗಾಯ

newsics.com ಲಿಮಾ: ಪೆರುವಿನಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಟ 27 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಚಾಲಕ ನಿದ್ದೆಗೆ ಜಾರಿದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ದಕ್ಷಿಣ ಪೆರುವಿನ ಅಯಾಕುಚೋ  ಪ್ರದೇಶದ ಬಳಿ ಈ ದುರಂತ ನಡೆದಿದೆ. ಮೃತಪಟ್ಟವರು ಗಣಿ ಕಾರ್ಮಿಕರಾಗಿದ್ದಾರೆ. ದುರಂತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಪದೇ ಪದೇ ಕೈಕೊಟ್ಟ ಕರೆಂಟ್, ಕಂಬ … Continue reading ಕಂದಕಕ್ಕೆ ಉರುಳಿದ ಬಸ್: 27 ಪ್ರಯಾಣಿಕರ ಸಾವು, 13 ಮಂದಿಗೆ ಗಾಯ