ಕೆನಡಾ: 180 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಪತನಕ್ಕೆ ಇರಾನ್ ನೇರ ಹೊಣೆ ಎಂದು ಕೆನಡಾ ಪ್ರಧಾನಿ ಜಸ್ಚಿನ್ ಟ್ರುಡೇವ್ ಆರೋಪಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸಂಬಂಧ ದೊರೆತಿರುವ ಎಲ್ಲ ಗುಪ್ತಚರ ಮಾಹಿತಿಗಳು ಇದನ್ನು ಸೂಚಿಸುತ್ತಿವೆ ಎಂದು ಹೇಳಿದ್ದಾರೆ. ಉಕ್ರೇನ್ ವಿಮಾನ ದುರಂತದಲ್ಲಿ ಕೆನಡಾದ 10ಕ್ಕೂ ಹೆಚ್ಚು ಮಂದಿ ನಾಗರಿಕರು ಬಲಿಯಾಗಿದ್ದರು. ವಿಮಾನ ಪತನ ಕುರಿತಂತೆ ಅಮೆರಿಕ ಕೂಡ ಸಂಶಯ ವ್ಯಕ್ತಪಡಿಸಿದ್ದು, ಕ್ಷಿಪಣಿ ದಾಳಿಯೇ ಇದಕ್ಕೆ ಕಾರಣವಾಗಿರಲೂ ಬಹುದು ಎಂದು ಹೇಳಿದೆ.