newsics.com
ವಾಶಿಂಗ್ಟನ್: ಶ್ವೇತಭವನಕ್ಕೆ ಅತಿ ವಿಷಪೂರಿತ ರಿಸಿನ್ ರಾಸಾಯನಿಕವನ್ನು ಲೇಪಿಸಿದ ಲಕೋಟೆ ಪತ್ರ ರವಾನಿಸಿದ್ದಳೆಂಬ ಸಂದೇಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಅಮೆರಿಕದ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿ ಮಹಿಳೆಯನ್ನು ಅಮೆರಿಕ-ಕೆನಡ ಗಡಿಯಲ್ಲಿ ಭಾನುವಾರ ಬಂಧಿಸಲಾಗಿದೆಯೆಂದು ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐನ ಕಾರ್ಯಾಲಯ ತಿಳಿಸಿದೆ.
ಬಂಧಿತ ಮಹಿಳೆ ಕೆನಡಿಯನ್ ಪೌರತ್ವವನ್ನು ಹೊಂದಿದ್ದಾಳೆಂದು ಎಫ್ಬಿಐ ಮೂಲಗಳು ತಿಳಿಸಿವೆ. ಶ್ವೇತಭವನಕ್ಕೆ ವಿಷಪೂರಿತ ಪತ್ರ ಕಳುಹಿಸಿರುವ ಪ್ರಕರಣಕ್ಕೆ ಸಂಬಂಧಿಸಿ ನೆರವು ನೀಡುವಂತೆ ತನಗೆ ಎಫ್ಬಿಐ ಮನವಿ ಮಾಡಿರುವುದಾಗಿ ರಾಯಲ್ ಕೆನಡಿಯನ್ ವೌಂಟೆಡ್ ಪೊಲೀಸ್ ಪಡೆ ತಿಳಿಸಿದೆ.
ಶ್ವೇತಭವನಕ್ಕೆ ವಿಷ ಪತ್ರ ಕಳುಹಿಸಿದ್ದ ಕೆನಡಾ ಮಹಿಳೆ ಸೆರೆ
Follow Us