Wednesday, July 6, 2022

ನಾನಿನ್ನು ಬೇಟೆಯಾಡಲಾರೆ… ರಾಜತಾಂತ್ರಿಕ ಸೇವೆಯಿಂದ ನಿವೃತ್ತಿ!

Follow Us

ಲಂಡನ್: ಲಾರ್ಡ್ ಪಾಲ್ಮೆರಿಸ್ಟನ್ ದಿ ಚೀಫ್ ಮೌಸರ್ ಲಂಡನ್‌ನ ಯುಕೆ ವಿದೇಶಿ ಮತ್ತು ಕಾಮನ್‌ವೆಲ್ತ್ ಕಚೇರಿಯ ರಾಜತಾಂತ್ರಿಕ ಸೇವೆಯಿಂದ ನಿವೃತ್ತಿ ಆಗ್ತಿದ್ದಾನೆ.
ಕೆಲಸಕ್ಕೆ ಸೇರಿದ ಮೇಲೆ ನಿವೃತ್ತಿ ಆಗಲೇಬೇಕು. ಅದರಲ್ಲೇನೂ ಮಹಾ ಅಂದ್ರಾ? ಆದರೆ ಕೆಲಸಕ್ಕೆ ಸೇರಿದ್ದು ಹಾಗೂ ನಿವೃತ್ತಿ ಅಗ್ತಿರೋದು ಮನುಷ್ಯನಲ್ಲ. ಬದಲಾಗಿ ಬೆಕ್ಕು.
ಹೌದು, ಡೌನಿಂಗ್ ಸ್ಟ್ರೀಟ್ ಮೌಸ್-ಕ್ಯಾಚರ್ ಲ್ಯಾರಿಯೊಂದಿಗೆ ನಿಯಮಿತ ಬೇಟೆಗಳಿಗೆ ಹೆಸರಾಗಿದ್ದ ಲಾರ್ಡ್ ಪಾಲ್ಮೆರಿಸ್ಟನ್ ಇಂಗ್ಲಿಷ್ ಕೌಂಟಿಸೈಡ್ ಬೆಕ್ಕು ನಿವೃತ್ತಿಯಾಗುತ್ತಿದ್ದು, ಸದ್ಯ ಈ ಬೆಕ್ಕು ವಿದೇಶಾಂಗ ಕಚೇರಿ ಸಿಬ್ಬಂದಿಯೊಬ್ಬರ ಮನೆಯಲ್ಲಿ ಲಾಕ್‌ಡೌನ್ ದಿನಗಳನ್ನು ಕಳೆಯುತ್ತಿದ್ದಾನೆ.
ಈ ಬೆಕ್ಕುಗಳು ಸಾಮಾನ್ಯವಲ್ಲ
ಬೆಕ್ಕಿನ ನಿವೃತ್ತಿ ವಿದೇಶಾಂಗ ಸಚಿವಾಲಯದ ಜನರ ಪಾಲಿಗೆ ದೊಡ್ಡ ಸಂಗತಿಯಾಗಿದ್ದು, ನಾಲ್ಕು ವರ್ಷಗಳ ಸಂತೋಷದಾಯಕ ಸೇವೆಯ ನಂತ ಲಾರ್ಡ್ ಪಾಲ್ಮೆರಿಸ್ಟನ್ ನಿವೃತ್ತಿಯಾಗುತ್ತಿದ್ದಾನೆ ಎಂದು ಸರ್ ಸೈಮನ್ ಮ್ಯಾಕ್ ಡೊನಾಲ್ಡ್ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.
ನಿವೃತ್ತಿ ಪಡಿತಿರೋ ಈ ಬೆಕ್ಕುಗಳು ಸಾಮಾನ್ಯದ ಬೆಕ್ಕು ಅಂದ್ಕೋಬೇಡಿ. ಈ ಡೌನಿಂಗ್ ಸ್ಟ್ರೀಟ್ ಮೌಸ್-ಕ್ಯಾಚರ್ ಲ್ಯಾರಿ ಹಾಗೂ ಲಾರ್ಡ್ ಪಾಲ್ಮೆರಿಸ್ಟನ್ ಎರಡೂ ಬೆಕ್ಕುಗಳು ತಮ್ಮದೇ ಆದ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಹೊಂದಿವೆ ಮತ್ತು ಡೌನಿಂಗ್ ಸ್ಟ್ರೀಟ್ ಕರ್ತವ್ಯ ನಿರ್ವಹಣೆಯಲ್ಲಿ, ಸುದ್ದಿ ಛಾಯಾಗ್ರಾಹಕರ ಸೆಂಟರ್ ಅಫ್ ಅಟ್ರಾಕ್ಷನ್ ಕೂಡ ಆಗಿದೆ.

ಆ.12ಕ್ಕೆ ವಿಶ್ವದ ಮೊದಲ ಕೋವಿಡ್ 19 ಲಸಿಕೆ ಲಭ್ಯ

“ಏಪ್ರಿಲ್ 2016 ರಲ್ಲಿ, ಪಾಲ್ಮೆರಿಸ್ಟನ್ ಎಂಬ ಬೆಕ್ಕು ಬ್ಯಾಟರ್ಸಿಯಾದಿಂದ ಆಯ್ಕೆಯಾಗಿ ಇಲ್ಲಿ ಆ ಬೆಕ್ಕು ಇಲಿ ಹಿಡಿಯುವುದಕ್ಕಾಗಿ ನೇಮಕವಾಗಿತ್ತು. ಅಷ್ಟೇ ಅಲ್ಲ ಈ ಬೆಕ್ಕು, 105,000 ಟ್ವಿಟರ್ ಫಾಲೋವರ್ಸ್ ಗಳನ್ನು ಕೂಡ ಹೊಂದಿದೆ.
ಸದಾ ನಾನು ಯುಕೆ ರಾಯಭಾರಿ
ತನ್ನ ಅಧಿಕೃತ ಖಾತೆಯಲ್ಲಿ ಈ ಬೆಕ್ಕು ವಿದಾಯ ಪತ್ರವನ್ನು ಪ್ರಕಟಿಸಿದ್ದು, ವಿದೇಶಾಂಗ ಕಚೇರಿಯ ಅಧಿಕೃತ ಸೇವೆಯ ನಾಲ್ಕು ವರ್ಷಗಳ ನಂತರ, ನಾನು ಎಲ್ಲರಿಂದ ದೂರವಾಗಿ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ಪ್ರಪಂಚದಾದ್ಯಂತ ಕೊರೋನಾವೈರಸ್ ಹರಡುವಿಕೆಯು ನನ್ನಂತೆಯೇ ಅನೇಕರು ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ನನ್ನ ರಾಜತಾಂತ್ರಿಕ ಕರಕುಶಲತೆಯು ಸಕಾರಾತ್ಮಕ ಫಲಿತಾಂಶಗಳನ್ನು ಪಡೆದಿದ್ದು ನಾನು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದದ್ದಾಗಿ ನಾನು ಹೇಳಬಲ್ಲೆ, ನಾನು ಇಲ್ಲಿ ನನ್ನ ಔಪಚಾರಿಕ ಪಾತ್ರವನ್ನು ಕೊನೆಗೊಳಿಸುತ್ತಿದ್ದರೂ, ನಾನು ಯಾವಾಗಲೂ ಯುಕೆ ಮತ್ತು ಹೊಸ ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ ರಾಯಭಾರಿಯಾಗಿರುತ್ತೇನೆ” ಎಂದು ಪತ್ರದಲ್ಲಿ ಬರೆಯಲಾಗಿದೆ. ಒಟ್ಟಿನಲ್ಲಿ ಸಾಕು ಪ್ರಾಣಿಗಳು ಕೆಲಸದಿಂದ ನಿವೃತ್ತಿ ಪಡೆಯೋ ಕಾಲ ಬಂದಿರೋದು ಮಾತ್ರ ಅಚ್ಚರಿಯ ಸಂಗತಿ.

ಮತ್ತಷ್ಟು ಸುದ್ದಿಗಳು

vertical

Latest News

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...

ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕ ಸ್ಫೋಟ: ಇಬ್ಬರು ಸೈನಿಕರಿಗೆ ಗಂಭೀರ ಗಾಯ

newsics.com ಶ್ರೀನಗರ: ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕವಾಗಿ ಸ್ಫೋಟವಾದ ಹಿನ್ನೆಲೆ ಇಬ್ಬರು ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಪೂಂಚ್ ಜಿಲ್ಲೆಯ ಜುಲ್ಲಾಸ್ ಪ್ರದೇಶದಲ್ಲಿ ಸೈನಿಕರು ಫೈರಿಂಗ್...
- Advertisement -
error: Content is protected !!