ನವದೆಹಲಿ: ನೋಟು ಅಮಾನ್ಯಿಕರಣದಿಂದ ನೇಪಾಳದಲ್ಲಿ 7 ಕೋಟಿ ರೂಪಾಯಿ ಹಳೇ ನೋಟುಗಳನ್ನು ಬದಲಾಯಿಸಿಕೊಡಿ ಎಂದು ನೇಪಾಳ ಭಾರತಕ್ಕೆ ಮತ್ತೆ ಮನವಿ ಮಾಡಿದೆ.
ಈ ನೋಟುಗಳು ನೇಪಾಳದ ಸೆಂಟ್ರಲ್ ಬ್ಯಾಂಕ್ನಲ್ಲಿ ಜಮಾ ಆಗಿದ್ದು, ಈ ನೋಟುಗಳನ್ನು ಭಾರತ ಸರ್ಕಾರ ಹೊಂದಾಣಿಕೆ ಮಾಡುತ್ತಿಲ್ಲ ಎಂದು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ಕುಮಾರ್ ಗ್ಯಾವಾಲಿ ದೂರಿದ್ದಾರೆ.
‘ಈ ಬಗ್ಗೆ ಅಂತಿಮ ತೀರ್ಮಾನ ಭಾರತಕ್ಕೆ ಬಿಟ್ಟದ್ದು. ಕಳೆದ ವರ್ಷಗಳಿಂದ ನಾವು ಮನವಿ ಮಾಡುತ್ತಿದ್ದೇವೆ. ಭಾರತವು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ’ ಎಂದು ಸಚಿವ ಪ್ರದೀಪ್ಕುಮಾರ್ ಹೇಳಿದ್ದಾರೆ.
ಭಾರತದಲ್ಲಿ ಜಾರಿಯಿರುವ ನೋಟುಗಳನ್ನು ಉಪ ಖಂಡಗಳಾದ ಭೂತಾನ್ ಮತ್ತು ನೇಪಾಳದಲ್ಲಿ ಬಳಸಲಾಗುತ್ತದೆ.
ನೋಟು ಬದಲಾವಣೆ: ಭಾರತಕ್ಕೆ ನೇಪಾಳ ದುಂಬಾಲು
Follow Us