Tuesday, March 2, 2021

ಮತಾಂತರ ಯತ್ನ ಆರೋಪ, ಹಲ್ಲೆ, ಪಾಕ್ ಗುರುದ್ವಾರದ ಮೇಲೆ ಕಲ್ಲು ತೂರಾಟ

ಇಸ್ಲಾಮಾಬಾದ್: ಯುವಕನನ್ನು ಸಿಖ್ ಕುಟುಂಬ ಥಳಿಸಿದೆ ಎಂದು ಆರೋಪಿಸಿ ಪಾಕಿಸ್ತಾನದ ಮುಸ್ಲಿಮರು ಗುರುದ್ವಾರದ ಮೇಲೆ ಕಲ್ಲು ತೂರಾಡಿದ್ದಾರೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಗುಂಪಿನ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಗುರುವಾರವಷ್ಟೇ ಇಲ್ಲಿ ಗುರು ಗೋವಿಂದ್​ ಸಿಂಗ್​ ಜಯಂತಿ ಆಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುದ್ವಾರದಲ್ಲಿ ಶುಕ್ರವಾರವೂ ಜನಜಂಗುಳಿ ಇತ್ತು. ಕಲ್ಲು ತೂರಾಟ ಸಮಯದಲ್ಲಿ ಒಳಗಿದ್ದ ಭಕ್ತರು ಆತಂಕಕ್ಕೆ ಈಡಾದರು.
ಪಾಕಿಸ್ತಾನದ ಪಂಜಾಬ್ ನಲ್ಲಿರುವ ನನಕಾನಾ ಗುರುದ್ವಾರದ ಸುತ್ತ ಸೇರಿರುವ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು, ಗುರುದ್ವಾರವನ್ನು ಧ್ವಂಸ ಮಾಡುವ ಬೆದರಿಕೆ ಹಾಕಿದ್ದಾರೆ. ಸ್ಥಳೀಯ ನೂರಾರು ಮುಸ್ಲಿಮರು ಶುಕ್ರವಾರ ಸಂಜೆ ನನಕಾನಾ ಗುರುದ್ವಾರ ಸುತ್ತವರೆದಿದ್ದು, ಗುರುದ್ವಾರದ ಮೇಲೆ ಕಲ್ಲು ತೂರಿದ್ದಾರೆ.
ಮಹಮ್ಮದ್​ ಹಸ್ಸನ್​ ಎಂಬಾತನ ಸಹೋದರ ಗುರುದ್ವಾರದ ಮುಖ್ಯಸ್ಥನ ಮಗಳಾದ ಜಗ್ಜಿತ್​ ಕೌರ್​ ಎಂಬಾಕೆಯನ್ನು ಅಪಹರಿಸಿ ಮತಾಂತರ ಮಾಡಿದ್ದಾನೆ. ಇದೇ ಕಾರಣಕ್ಕೆ ಗುರುದ್ವಾರದ ಮುಖ್ಯಸ್ಥರ ಕುಟುಂಬ ಮಹಮ್ಮದ್​ ಹಸ್ಸನ್ ಸಹೋದರನ ಮೇಲೆ ಹಲ್ಲೆ ಮಾಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿನ ಮುಸ್ಲಿಮರು ಏಕಾಏಕಿ ಗುಂಪು ಸೇರಿ ಗುರುದ್ವಾರದ ಮೇಲೆ ದಾಳಿ ಮಾಡಿದ್ದಾರೆ. ಉದ್ರಿಕ್ತರು ಇಲ್ಲಿ ಗುರುದ್ವಾರ ಇರಲು ಬಿಡುವುದಿಲ್ಲ. ಇದನ್ನು ಧ್ವಂಸ ಮಾಡಬೇಕು ಎಂದು ಕೂಗುತ್ತಿದ್ದಾರೆ. ಅಲ್ಲದೆ ಈ ಸ್ಥಳದ ನನಕಾನಾ ಸಾಹಿಬ್​ ಎಂಬ ಹೆಸರನ್ನು ತೆಗೆದು ಅದಕ್ಕೆ ಗುಲಾಮ್​ ಎ ಮುಸ್ತಾಫ್​ ಎಂದು ಹೆಸರಿಡುತ್ತೇವೆ. ನನಕಾನಾದಲ್ಲಿನ್ನು ಸಿಖ್ಖರು ಇರುವಂತಿಲ್ಲ” ಎಂದು ಘೋಷಣೆ ಕೂಗುತ್ತಿದ್ದಾರೆ.
ಮಹಮ್ಮದ್​ ಹಸ್ಸನ್ ಮಾತನಾಡಿ, ಸಿಖ್ಖರ ಹುಡುಗಿಯನ್ನು ಅಪಹರಿಸಿ, ಹುಡುಗಿಯನ್ನು ಮತಾಂತರ ಮಾಡಿ, ಮದುವೆಯಾಗಿದ್ದಕ್ಕೆ ನನ್ನ ಸೋದರನಿಗೆ ಥಳಿಸಲಾಗಿದೆ. ಕುಟುಂಬದ ಪ್ರಕಾರ ಮತಾಂತರಗೊಂಡ ಆ ಸಿಖ್​ ಹುಡುಗಿಗೆ ಈಗ ಆಯೇಷಾ ಎಂದು ಹೆಸರಿಡಲಾಗಿದೆ. ಆಕೆ ಮತ್ತೆ ಮತಾಂತರವಾಗಲು ನಿರಾಕರಿಸಿದ್ದಾಳೆ ಎಂದು ಹೇಳಿದ್ದಾನೆ.

ಮತ್ತಷ್ಟು ಸುದ್ದಿಗಳು

Latest News

ಖಾಕಿ ಬಟ್ಟೆ ಧರಿಸಲು ಸಜ್ಜಾಗುತ್ತಿದ್ದಾರೆ 15 ಮಂಗಳಮುಖಿಯರು!

newsics.comರಾಯ್'ಪುರ(ಛತ್ತೀಸ್ಗಢ): 15 ತೃತೀಯ ಲಿಂಗಿಗಳು  ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.ದೈಹಿಕ ಪರೀಕ್ಷೆಯ ಫಲಿತಾಂಶ ಇಂದು(ಮಾ.1)...

ಗೃಹಸಾಲದ ಮೇಲಿನ ಆರಂಭಿಕ ಬಡ್ಡಿದರ ಇಳಿಸಿದ ಎಸ್’ಬಿಐ

newsics.comನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಶೇ. 6.70ಕ್ಕೆ ಇಳಿಕೆಯಾಗಿದೆ.75 ಲಕ್ಷ ರೂ.ಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 6.70ರಷ್ಟಿರಲಿದ್ದು,...

ಕೊರೋನಾ ಲಸಿಕೆ ಪಡೆದ ಇನ್ಫೋಸಿಸ್ ಮೂರ್ತಿ ದಂಪತಿ

newsics.comಬೆಂಗಳೂರು: ಮೂರನೇ ಹಂತದ ವ್ಯಾಕ್ಸಿನ್ ಸೋಮವಾರ ಆರಂಭವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರು.ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು...
- Advertisement -
error: Content is protected !!