newsics.com
ಇಂಗ್ಲೆಂಡ್: ಬ್ರಿಟಿಷ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯಲ್ಲಿ ತಂದ ಕೇಕ್ ನ ತುಂಡು ಈಗ 1.9 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
1981ರಲ್ಲಿ ಅಂದರೆ 40 ವರ್ಷಗಳ ಹಿಂದೆ ನಡೆದ ಮದುವೆ ಸಮಾರಂಭದಲ್ಲಿ 23 ಕೇಕ್ ಗಳನ್ನು ತರಲಾಗಿತ್ತು. ಕೇಕ್ ಅನ್ನು ಸಂರಕ್ಷಿಸಿ ಇಟ್ಟಿದ್ದು, ಅದರಲ್ಲಿ ಒಂದು ಕೇಕಿನ ತುಂಡನ್ನು ಹರಾಜಿಗೆ ಇಡಲಾಗಿತ್ತು.
ಕೇಕ್ ಸ್ಲೈಸ್ ಅನ್ನು ಲೀಡ್ಸ್‌ನ ನಗರದ ಖಾಸಗಿ ಕಲೆಕ್ಟರ್ ಜೆರ್ರಿ ಲೇಟನ್ ಎನ್ನುವವರು ಖರೀದಿಸಿದ್ದಾರೆ.
1981ರಲ್ಲಿ ಯ ಚಾರ್ಲ್ಸ್ ಮತ್ತು ಡಯಾನಾ ವಿವಾಹವಾಗಿದ್ದರು. ಆದರೆ 11 ವರ್ಷಗಳ ನಂತರ 1992 ರಲ್ಲಿ ಅವರು ವಿಚ್ಛೇದನ ಪಡೆದಿದ್ದು. 1997 ರಲ್ಲಿ, ರಾಜಕುಮಾರಿ ಡಯಾನಾ ಕಾರು ಅಪಘಾತದಲ್ಲಿ ನಿಧನರಾದರು.