ನವದೆಹಲಿ: ಭಾರತದೊಂದಿಗೆ ಲಡಾಖ್ ನಲ್ಲಿ ಲಡಾಯಿಗೆ ಮುಂದಾಗಿ ತೀವ್ರ ಮುಖಭಂಗ ಅನುಭವಿಸಿದ ಚೀನಾ ಈಗ ಜಪಾನ್ ಜತೆ ಸೆಣಸಾಟಕ್ಕೆ ಮುಂದಾಗಿದೆ.
ಜಪಾನ್ ನ ಸೆಂಕಾಕು ದ್ವೀಪ ಸಮೂಹದ ಸುತ್ತ 5ಕ್ಕೂ ಹೆಚ್ಚು ಜನವಸತಿ ಇಲ್ಲದ ದ್ವೀಪಗಳಿದ್ದು, ಇವುಗಳನ್ನು ವಶಪಡಿಸಿಕೊಳ್ಳಲು ಚೀನಾ ಹೋರಾಟಕ್ಕಿಳಿದಿದೆ.
ರಫೇಲ್’ಗಳನ್ನು ಲಡಾಖ್ ಗಡಿಯಲ್ಲಿ ನಿಯೋಜಿಸಲು ಚಿಂತನೆ
ಜಪಾನ್ ಮೀನುಗಾರರ ಬೋಟುಗಳು ಪೂರ್ವ ಚೀನಾ ಮಹಾಸಾಗರದ ಸೆಂಕಾಕು ದ್ವೀಪ ಪ್ರದೇಶದಲ್ಲಿ ಅತಿಕ್ರಮಣ ಮಾಡುತ್ತಿರುವುದಾಗಿ ಆರೋಪಿಸಿರುವ ಚೀನಾ ಈ ಪ್ರದೇಶದಲ್ಲಿ ಅತಿಕ್ರಮಣ ನಡೆಸಲು ಸಿದ್ಧವಾಗಿದೆ.
ಈಜಿಪ್ಟ್ ಪ್ರಜೆಗಳಿಬ್ಬರನ್ನು ರಕ್ಷಿಸಿದ ಕನ್ನಡಿಗ ಕುವೈತ್’ನಲ್ಲಿ ಸಮುದ್ರ ಪಾಲು
ಈ ಪ್ರದೇಶದಲ್ಲಿ ಜಪಾನ್ನ ಮಿಲಿಟರಿ ನಿಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಚೀನಾ, ಇದೀಗ ಮೀನುಗಾರಿಕಾ ಬೋಟುಗಳ ಸಂಚಾರಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.
ಸೆಂಕಾಕು ಜಪಾನ್ನ ಭಾಗವಾಗಿದ್ದು ಈ ಪ್ರದೇಶಕ್ಕೆ ಟೊನೊಶಿರೊ ಸೆಂಕಾಕು ಎಂದು ದ್ವೀಪ ಸಮೂಹಕ್ಕೆ ಮರುನಾಮಕರಣ ಮಾಡಲು ಇಶಿಗಾಕಿ ನಗರಾಡಳಿತ ನಿರ್ಣಯ ಕೈಗೊಂಡಿತ್ತು. ಇದಕ್ಕೂ ಚೀನಾ ಆಕ್ಷೇಪ ವ್ಯಕ್ತಪಡಿಸಿ, ಆ ನಿರ್ಣಯವನ್ನು ಕೈಬಿಡುವಂತೆ ಜಪಾನ್ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಜಪಾನ್ ಆ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.