newsics.com
ನ್ಯೂಯಾರ್ಕ್: ಬೇರೆ ದೇಶಗಳೊಂದಿಗೆ ಯುದ್ಧ ಸಾರಲು ಚೀನಾ ಬಯಸುವುದಿಲ್ಲ ಎಂದು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದ 75ನೇ ಸಭೆಯನ್ನುದ್ದೇಶಿಸಿ ನಿನ್ನೆ(ಸೆ.22) ಧ್ವನಿಮುದ್ರಿತ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಪ್ರಭಾವ ಮೆರೆಯಲು ಅಥವಾ ತನ್ನ ಪ್ರಾಬಲ್ಯ ಸ್ಥಾಪಿಸಲು, ಭೂ ಪ್ರದೇಶ ವಿಸ್ತರಿಸಲು ಚೀನಾ ಯಾವತ್ತಿಗೂ ಇಷ್ಟಪಡುವುದಿಲ್ಲ ಎಂದು ಕ್ಸಿ ಜಿನ್ ಪಿಂಗ್ ಸ್ಪಷ್ಟಪಡಿಸಿದ್ದಾರೆ. ಬೇರೆ ದೇಶಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆ, ಸಂಧಾನಗಳ ಮೂಲಕವೇ ಬಗೆಹರಿಸಲು ಚೀನಾ ನೋಡುತ್ತದೆ ಎಂದಿದ್ದಾರೆ. ಪೂರ್ವ ಲಡಾಕ್ ನಲ್ಲಿ ಭಾರತ-ಚೀನಾ ಸೇನೆ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಉದ್ನಿಗ್ನ ಸ್ಥಿತಿ, ಕೇಳಿಬರುತ್ತಿರುವ ಅಭಿಪ್ರಾಯಗಳಿಗೆ ಅಲ್ಲಿನ ಕ್ಸಿ ಜಿನ್ ಪಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ. ದೇಶಗಳ ಮಧ್ಯೆ ಭಿನ್ನಾಭಿಪ್ರಾಯವನ್ನು ತಗ್ಗಿಸಿ ವಿವಾದವನ್ನು ಶಾಂತಿ, ಸಂಧಾನ ಮಾತುಕತೆಗಳ ಮೂಲಕ ಬಗೆಹರಿಸಲು ನಾವು ಬಯಸುತ್ತೇವೆ ಎಂದರು.
ಮೇ 5ರ ನಂತರ ಪೂರ್ವ ಲಡಾಕ್ ನ ಗಡಿಯಲ್ಲಿ ಚೀನಾ ಸೇನೆ ನಿಲುಗಡೆಯಾದ ನಂತರ ನಡೆದ ಕದನದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿ ಚೀನಾದ ಕಡೆಯ ಯೋಧರು ಕೂಡ ಅಪಾರ ಸಾವು ನೋವು ಕಂಡಿದ್ದರು. ಈ ಬೆಳವಣಿಗೆ ಬಳಿಕ ಜುಲೈ 4ರಂದು ಲಡಾಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು.
ಚೀನಾಗೆ ಯುದ್ಧ ಬೇಕಿಲ್ಲ- ಕ್ಸಿ ಜಿನ್ ಪಿಂಗ್
Follow Us