ಬೀಜಿಂಗ್: ಈವರೆಗೆ 56ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಚೀನಿ ಅಧಿಕಾರಿಗಳು ಹರಸಾಹಸಪಡುತ್ತಿದ್ದು, ದೇಶವು ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ನಾವು ಸ್ಥಿರವಾದ ಆತ್ಮವಿಶ್ವಾಸ, ಜತೆಯಾಗಿ ಶ್ರಮಿಸುವಿಕೆ, ವೈಜ್ಞಾನಿಕ ಪ್ರತಿಬಂಧಕ ಕ್ರಮಗಳು ಹಾಗೂ ನಿಖರವಾದ ನೀತಿಗಳ ಮೂಲಕ ಖಂಡಿತವಾಗಿಯೂ ನಾವು ಜಯ ಗಳಿಸಲು ಶಕ್ತರಾಗಲಿದ್ದೇವೆ ಎಂದು ಕ್ಸಿ ಜಿನ್‌ಪಿಂಗ್ ತಿಳಿಸಿದ್ದಾರೆ.
ಈಗಾಗಲೇ ಚೀನಾದಲ್ಲಿ 1300ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ವೂಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಈಗ ಚೀನಾದ ವಿವಿಧೆಡೆ ಹರಡಿದೆ. ಫ್ರಾನ್ಸ್ ಸೇರಿ 12 ಕ್ಕೂ ದೇಶಗಳಲ್ಲಿ ಕಾಣಿಸಿಕೊಂಡಿದೆ.
ಚೀನಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ- ಜಿನ್ ಪಿಂಗ್
Follow Us