Tuesday, March 28, 2023

ಭಾರತದ ಗಡಿಯಲ್ಲಿ ಮಿಲಿಟರಿ ಮೂಲಸೌಕರ್ಯ ಹೆಚ್ಚಿಸುತ್ತಿದೆ ಚೀನಾ

Follow Us

newsics.com
ನವದೆಹಲಿ: ಕಳೆದ 3 ವರ್ಷಗಳಲ್ಲಿ ಭಾರತದೊಂದಿಗಿನ ಗಡಿಯ ಮುಂಚೂಣಿ ಪ್ರದೇಶದಲ್ಲಿ ವಾಯುನೆಲೆಗಳು, ವಾಯು ರಕ್ಷಣಾ ತಾಣಗಳು ಮತ್ತು ಹೆಲಿಕಾಪ್ಟರ್ ನಿಲ್ದಾಣಗಳ ಸಂಖ್ಯೆಯನ್ನು ಚೀನಾ ದುಪ್ಪಟ್ಟುಗೊಳಿಸಿದೆ.
ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2017ರಲ್ಲಿ ಸೃಷ್ಟಿಯಾಗಿದ್ದ ಭಾರತದೊಂದಿಗಿನ ಡೋಕ್ಲಾಂ ಬಿಕ್ಕಟ್ಟು ಈ ಬದಲಾವಣೆಗೆ ಕಾರಣ ಎನ್ನಲಾಗಿದೆ. ಚೀನಾ ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವಿನ್ನೂ ಪೂರ್ಣಗೊಂಡಿಲ್ಲ. ಹಲವೆಡೆ ಇನ್ನೂ ಪ್ರಗತಿಯಲ್ಲಿದೆ. ಮೂರು ವಾಯುನೆಲೆಗಳು, ಐದು ವಾಯು ರಕ್ಷಣಾ ತಾಣಗಳು ಮತ್ತು ಐದು ಹೆಲಿಕಾಪ್ಟರ್ ನಿಲ್ದಾಣಗಳು ಸೇರಿದಂತೆ ಕನಿಷ್ಠ 13 ನೂತನ ಮಿಲಿಟರಿ ಮೂಲಸೌಕರ್ಯಗಳನ್ನು ಚೀನಾ ಭಾರತದೊಂದಿಗಿನ ಗಡಿಯಲ್ಲಿ ನಿರ್ಮಿಸುತ್ತಿದೆ. ಈ ಪೈಕಿ ನಾಲ್ಕು ಹೆಲಿಕಾಪ್ಟರ್ ನಿಲ್ದಾಣಗಳ ನಿರ್ಮಾಣ ಕಾರ್ಯ ಮೇ ತಿಂಗಳಿನಲ್ಲಿ ಲಡಾಖ್ ಬಿಕ್ಕಟ್ಟು ಉಂಟಾದ ಬಳಿಕ ಆರಂಭಗೊಂಡಿದೆ ಎಂದು ವರದಿ ತಿಳಿಸಿದೆ.

ಚೀನಾದಿಂದ ಆಮದು ಪ್ರಮಾಣ ಶೇ.27 ಕುಸಿತ

ಜಾಗತಿಕ ಭೂ ರಾಜಕೀಯ ಬೇಹುಗಾರಿಕೆ ವೇದಿಕೆ ಸ್ಟ್ರಾಟ್‌ಫರ್ ತನ್ನ ವರದಿಯಲ್ಲಿ ಚೀನಾದ ವಿಸ್ತರಣೆ ಬಗ್ಗೆ ಹೇಳಿದೆ. ಹಾಲಿ ಲಡಾಖ್ ಬಿಕ್ಕಟ್ಟಿಗೆ ಸ್ವಲ್ಪವೇ ಮೊದಲು ಗಡಿಯುದ್ದಕ್ಕೂ ಚೀನಾ ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಂಡಿರುವುದು ತನ್ನ ಗಡಿಪ್ರದೇಶಗಳಲ್ಲಿ ನಿಯಂತ್ರಣವನ್ನು ಪ್ರತಿಪಾದಿಸುವ ಅದರ ಪ್ರಯತ್ನಗಳ ಭಾಗವಾಗಿದೆ ಎಂದು ಸ್ಟ್ರಾಟ್‌ಫರ್‌ನ ಹಿರಿಯ ಜಾಗತಿಕ ವಿಶ್ಲೇಷಕ ಮತ್ತು ವರದಿಯ ಲೇಖಕ ಸಿಮ್ ಟಾಕ್ ಹೇಳಿದ್ದಾರೆ.
ಭಾರತದ ಭದ್ರತೆಯ ಮೇಲೆ ಪರಿಣಾಮವನ್ನುಂಟು ಮಾಡುವ ಮಿಲಿಟರಿ ಸ್ಥಾವರಗಳ ಉಪಗ್ರಹ ಚಿತ್ರಗಳ ವಿವರವಾದ ವಿಶ್ಲೇಷಣೆಯ ಮೂಲಕ ಚೀನಾದ ಮಿಲಿಟರಿ ಮೂಲಸೌಕರ್ಯ ನಿರ್ಮಾಣಗಳ ಸ್ಥೂಲಚಿತ್ರಣವನ್ನು ಸಿಮ್ ಟಾಕ್ ವಿವರಿಸಿದ್ದಾರೆ.

ಹೈಡ್ರೋಜನ್ ಚಾಲಿತ ವಿಮಾನ ನಿರ್ಮಾಣಕ್ಕೆ ಏರ್ ಬಸ್ ಸಿದ್ಧತೆ

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!