ಬೀಜಿಂಗ್: ದೇಶದಲ್ಲಿ ತಡೆಯಿಲ್ಲದಂತೆ ವ್ಯಾಪಿಸುತ್ತಿರುವ ಕೊರೋನಾ ವೈರಾಣು ಸೋಂಕು ನಿವಾರಣೆಗೆ ಚೀನಾ ಸರ್ಕಾರ ಅಮೆರಿಕದ ನೆರವು ಕೋರಿದೆ.
ಚೀನಾ ಸರ್ಕಾರ ಹಾಗೂ ಜನರು ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಎಲ್ಲಾ ಪ್ರಯತ್ನ ನಡೆಸುತ್ತಿವೆ. ಈ ಪ್ರಯತ್ನಗಳು ಈಗ ನಿಧಾನವಾಗಿ ಫಲ ನೀಡುತ್ತಿವೆ. ಈಗಾಗಲೇ ಹಲವು ಬಾರಿ ಅಮೆರಿಕ ಚೀನಾಗೆ ನೆರವು ನೀಡುವ ಹೇಳಿಕೆ ನೀಡಿದೆ. ಶೀಘ್ರದಲ್ಲೇ ಸಹಾಯ ಒದಗಿಸಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುಯಾ ಚುಂನ್ಯಿಂಗ್ ಹೇಳಿದ್ದಾರೆ.
ಅಮೆರಿಕ ಈಗಾಗಲೇ ಚೀನಾದಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದೆ.
ಕೊರೋನಾ ವೈರಸ್ : ಅಮೆರಿಕದ ನೆರವು ಕೋರಿದ ಚೀನಾ
Follow Us