Saturday, April 17, 2021

ಭಾರತ ನೇಪಾಳ ಸಂಬಂಧಕ್ಕೆ ಹುಳಿ ಹಿಂಡುತ್ತಿರುವ ಚೀನಾ

ನವದೆಹಲಿ:  ಕೊರೋನಾ ಮಹಾ ಮಾರಿಯ ಮಧ್ಯೆ ಕೂಡ ಚೀನಾ ತನ್ನ ನರಿ ಬುದ್ದಿ ಪ್ರದರ್ಶಿಸಿದೆ. ನೇಪಾಳ ಜತೆ ಭಾರತ ಹೊಂದಿರುವ ಐತಿಹಾಸಿಕ ಸಂಬಂಧಕ್ಕೆ ಹುಳಿ ಹಿಂಡುವ ಪ್ರಯತ್ನ ನಡೆಸಿದೆ. ಭಾರತ, ನೇಪಾಳ ಮತ್ತು ಚೀನಾದ ಭೂ ಭಾಗ ಒಟ್ಟು ಸೇರುವ ಲಿಪುಲೇಕ್ ಕುರಿತು ನೇಪಾಳ ಮೊದಲ ಬಾರಿ ಅಪಸ್ವರ ಎತ್ತಿದೆ. ಇದು ಚೀನಾದ ಕುತಂತ್ರದಿಂದಾಗಿ ನಡೆದಿದೆ. ಕೈಲಾಸ ಮಾನಸ ಸರೋವರ ಯಾತ್ರಾಥಿಗಳ ಅನುಕೂಲಕ್ಕಾಗಿ ಭಾರತ ಇತ್ತೀಚೆಗೆ  ದರುಚುಲದಿಂದ ಲಿಪುಲೇಕ್ ಗೆ ರಸ್ತೆ  ನಿರ್ಮಾಣ ಮಾಡಿತ್ತು,  ಲಿಪುಲೇಕ್ ಭೂ ಭಾಗ ತನಗೆ ಸೇರಿದ್ದು ಎಂದು ನೇಪಾಳ ವಾದ ಮಂಡಿಸುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭೂ ಸೇನಾ ಮುಖ್ಯಸ್ಥ ಎಂ ಎಂ ನರವಾನೆ ಯಾವುದೊ ಬಾಹ್ಯ ಶಕ್ತಿಯ ಪ್ರೇರಣೆಯಿಂದ ನೇಪಾಳ ಈ ರೀತಿ ವರ್ತಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು  ನೇರವಾಗಿ ಚೀನಾದ ಹೆಸರು ಹೇಳಿಲ್ಲ. ಹೊಸ ವಿವಾದದ ಬಗ್ಗೆ ಮಾತನಾಡಿರುವ ನೇಪಾಳ ಅಧ್ಯಕ್ಷ ರಾದ ವಿದ್ಯಾದೇವಿ ಭಂಡಾರಿ, ಹೊಸ ರಾಜಕೀಯ ನಕ್ಷೆಯನ್ನು ನೇಪಾಳ  ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ. 1816ರಲ್ಲಿ ಬ್ರಿಟಿಷರು ನೇಪಾಳ ದೊರೆಯನ್ನು ಸೋಲಿಸಿ ಕಾಲಾಪಾನಿ ಮತ್ತು  ಲಿಪುಲೇಕ್ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!