ಬೀಜಿಂಗ್: ಮಾರಕ ಕೊರೋನಾ ವೈರಸ್ ಚೀನಾದಲ್ಲಿ ನೂರಾರು ಮಂದಿಯನ್ನು ಬಲಿಪಡೆಯುತ್ತಿದ್ದರೂ ಅಲ್ಲಿನ ವಿಶ್ವ ವಿದ್ಯಾನಿಲಯಗಳು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿವೆ. ಕೊರೋನಾ , ಗಿರೋನಾದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ತಕ್ಷಣ ಎಲ್ಲರೂ ವಿಶ್ವ ವಿದ್ಯಾನಿಲಯಕ್ಕೆ ಹಾಜರಾಗಬೇಕು ಎಂದು ವಿಶ್ವ ವಿದ್ಯಾನಿಲಯಗಳು ಭಾರತದ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಕೇರಳದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚೀನಾದ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಯುತ್ತಿದ್ದಾರೆ. ಚೀನಾಕ್ಕೆ ಪ್ರವಾಸ ಮಾಡದಂತೆ ಭಾರತದ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದ್ದರೂ, ವಿದ್ಯಾರ್ಥಿಗಳ ಮೇಲೆ ಚೀನಾ ಒತ್ತಡ ಹೇರುತ್ತಿದೆ ಎಂದು ಆರೋಪಿಸಲಾಗಿದೆ.