ಬೀಜಿಂಗ್: ಚೀನಾದ ಜನನ ಪ್ರಮಾಣ ಕಳೆದ ವರ್ಷ ಚೀನಾ ಇತಿಹಾಸದಲ್ಲೇ ಮೊದಲ ಬಾರಿಗೆ ಕನಿಷ್ಠ ಮಟ್ಟ ತಲುಪಿದ್ದು, 1949ರಲ್ಲಿ ಕಮ್ಯುನಿಸ್ಟ್ ದೇಶವಾಗಿ ಬದಲಾದಾಗಿನಿಂದ ಇಂತಹ ಸನ್ನಿವೇಶ ಇದೇ ಮೊದಲು ಎಂದು ರಾಷ್ಟ್ರೀಯ ಅಂಕಿ ಸಂಖ್ಯೆ ಸಂಸ್ಥೆ ತಿಳಿಸಿದೆ
ಸತತ ಮೂರು ವರ್ಷಗಳಿಂದ ಜನನ ಪ್ರಮಾಣ ಕುಸಿಯುತ್ತಲೇ ಇದೆ. 2019ರಲ್ಲಿ ಜನನ ದರವು 1,000 ಜನರಿಗೆ 10.48 ಆಗಿತ್ತು. 2019ರಲ್ಲಿ ಚೀನಾದಲ್ಲಿ 1.46 ಕೋಟಿ ಮಕ್ಕಳು ಜನಿಸಿವೆ. 2018ರಲ್ಲಿ 1.52 ಕೋಟಿ ಮಕ್ಕಳು ಜನಿಸಿದ್ದರೆ, 2017ರಲ್ಲಿ 1.72 ಕೋಟಿ ಮಕ್ಕಳು ಜನಿಸಿವೆ. ಈ ಪ್ರಮಾಣ ವೃದ್ಧರ ಹೆಚ್ಚಳಕ್ಕೆ ಕಾರಣವಾಗಿ ಕೆಲಸ ಮಾಡುವವರ ಸಂಖ್ಯೆಯ ಇಳಿಕೆಗೆ ಕಾರಣವಾಗಬಹುದು. ಇದು ಆರ್ಥಿಕತೆ ಮೇಲೆ ಒತ್ತಡ ಹೇರಬಹುದು ಎಂಬ ಆತಂಕ ಶುರುವಾಗಿದೆ.
ಜನಸಂಖ್ಯೆಯಲ್ಲಿನ ಹೆಣ್ಣು ಗಂಡು ಅಸಮಾನತೆ ತಡೆಗಟ್ಟುವ ಉದ್ದೇಶದಿಂದ ಚೀನಾ 2016ರಲ್ಲಿ ತನ್ನ ಒಂದೇ-ಮಗು ನೀತಿಯನ್ನು ಸಡಿಲಿಸಿ, ದಂಪತಿಯೊಂದಕ್ಕೆ ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಆದರೆ, ಪರಿಣಾಮಕಾರೀ ಫಲಿತಾಂಶ ಸಿಕ್ಕಿಲ್ಲ. 2019ರ ಅಂತ್ಯದ ವೇಳೆಗೆ ಚೀನಾದ ಜನಸಂಖ್ಯೆ1.4 ಬಿಲಿಯನ್ ನಷ್ಟಿದೆ.
ಚೀನಾದ ಜನನ ಪ್ರಮಾಣ ದಾಖಲೆ ಕುಸಿತ
Follow Us