ಬೀಜಿಂಗ್: ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಪ್ರಥಮ ಬಾರಿಗೆ ಕೊರೋನಾ ವೈರಾಣು ಕಾಣಿಸಿಕೊಂಡಿರುವ ಕುರಿತು ಎಚ್ಚರಿಕೆ ನೀಡಿದ್ದ ವೈದ್ಯ ಸೋಂಕಿನಿಂದ ಮೃತಪಟ್ಟಿದ್ದಾರೆ.
35 ವರ್ಷದ ಈ ವೈದ್ಯ ಸೇಋಿ ಇತರ ಎಂಟು ಜನರು ಸೋಂಕು ಕಾಣಿಸಿಕೊಳ್ಳುತ್ತಿರುವ ಕುರಿತು ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರಾದರೂ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಜೊತೆಗೆ, ಪ್ರಪ್ರಥಮ ಬಾರಿಗೆ ಏಳು ಜನರನ್ನು ಸೋಂಕಿನ ತಪಾಸಣೆಗೊಳಪಡಿಸಿದ್ದಾರೆ ಎಂಬ ಸುದ್ದಿಯನ್ನು ಬಹಿರಂಗಪಡಿಸಿದ ಆರೋಪವೂ ಈ ವೈದ್ಯನ ಮೇಲಿತ್ತು.