Wednesday, November 30, 2022

ಪುರುಷರನ್ನೇ ‘ಗರ್ಭಿಣಿ’ಯಾಗಿಸಲು ಹೊರಟ ಚೀನಾ‌ ವಿಜ್ಞಾನಿಗಳು!

Follow Us

newsics.com

ಬಿಜಿಂಗ್: ಇತ್ತೀಚೆಗೆ ಚೀನಾದ ವುಹಾನ್ ಲ್ಯಾಬ್’ನಿಂದ ಹೊರಬಂದ ವಿಜ್ಞಾನಿಯೊಬ್ಬರು ‘ಚೀನಾ ಚಿತ್ರವಿಚಿತ್ರ ಸಂಶೋಧನೆಗಳನ್ನು ನಡೆಸುತ್ತಿರುತ್ತದೆ’ ಎಂದು ಹೇಳಿಕೆ ನೀಡಿದ್ದರು.

ಈ ವಿಜ್ಞಾನಿಯ ಹೇಳಿಕೆ ಮತ್ತೊಮ್ಮೆ‌ ನಿಜವಾಗಿದೆ. ಹೌದು, ಚೀನಾದ ವಿಜ್ಞಾನಿಗಳು ಈಗ ಪುರುಷರನ್ನೇ ಗರ್ಭಿಣಿಯ(male pregnant)ರನ್ನಾಗಿಸಲು ಹೊರಟಿದ್ದಾರೆ.

ಅಂದಮಾತ್ರಕ್ಕೆ ಇದು ತೀರಾ ಹೊಸ ವಿಚಾರವೇನಲ್ಲ. ಈ ಬಗ್ಗೆ ಈಗಾಗಲೇ ಹಲವು ಸಂಶೋಧನೆಗಳು‌ ನಡೆದಿವೆ. ಈ ಮೊದಲು NYU ಸ್ಕೂಲ್ ಆಫ್ ಮೆಡಿಸಿನ್ ಕೂಡ ಟ್ರಾನ್ಸ್ ಜೆಂಡರ್ಸ್’ಗಳ ಮೇಲೆ ಈ ಪ್ರಯೋಗ ನಡೆಸಿತ್ತು.

ಆದರೆ, ಚೀನಾದ ವಿಜ್ಞಾನಿಗಳು ಗಂಡು ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಈ ಪ್ರಯೋಗವನ್ನು ಶಾಂಘೈನ ನೌಕಾ ವೈದ್ಯಕೀಯ ವಿಶ್ವವಿದ್ಯಾಲಯ (Naval Medical University) ಮಾಡಿದೆ.

ಸಂಶೋಧಕರು ಮೊದಲು ಹೆಣ್ಣು ಇಲಿಗಳ ದೇಹದಿಂದ ಗರ್ಭಾಶಯವನ್ನು ಹೊರತೆಗೆದು, ನಂತರ ಅದನ್ನು ಗಂಡು ಇಲಿಯ ದೇಹದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಿದ್ದಾರೆ. ಈ ಗರ್ಭಾಶಯ ಕಸಿ ಬಳಿಕ ಗಂಡು ಇಲಿ ಗರ್ಭ ಧರಿಸಿದ್ದು, ಸಿಸೇರಿಯನ್ ಮೂಲಕ ಹೆರಿಗೆ ಪ್ರಕ್ರಿಯೆ ಮಾಡಲಾಗಿದೆ.

ಈ ಸಂಶೋಧನೆಯನ್ನು ಒಟ್ಟು ನಾಲ್ಕು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ಇದನ್ನು ‘ಇಲಿ ಮಾದರಿ’ ಎಂದು ಕರೆಯಲಾಗುತ್ತಿದೆ. ಆದರೆ ಇದುವರೆಗೆ ಈ ಪ್ರಯೋಗದ ಯಶಸ್ಸಿನ ಪ್ರಮಾಣ ಕೇವಲ ಶೇ.3.68 ರಷ್ಟು ಮಾತ್ರ ಇದೆ ಎಂದು ವರದಿಯಾಗಿದೆ.

ಹತ್ತು ಮರಿಗಳಿಗೆ ಜನ್ಮ ನೀಡಿದ ಗಂಡು ಇಲಿ:

ಗಂಡು ಇಲಿಯಲ್ಲಿ ಈ ಪ್ರಯೋಗ ಯಶಸ್ವಿಯಾಯಿತು. ಗಂಡು ಇಲಿ 10 ಮರಿಗಳಿಗೆ ಜನ್ಮ ನೀಡಿದೆ ಎಂದು ಚೀನಾದ ಸಂಶೋಧಕರು‌ ಹೇಳಿಕೊಂಡಿದ್ದಾರೆ.

ಚೀನಾದ ವಿದ್ಯಾನಿಗಳು ಇದೀಗ ಈ Rat Model ಪ್ರಯೋಗವನ್ನು ಮನುಷ್ಯರ ಮೇಲೆ ನಡೆಸಲು ಮುಂದಾಗಿದ್ದಾರೆ.

ಗಂಡು ಪ್ರಾಣಿಯನ್ನು ಗರ್ಭಿಣಿಯನ್ನಾಗಿಸಿದ ಮೊದಲ ಪ್ರಕರಣ ಇದಾಗಿದೆ. ಇದರಿಂದ ಉತ್ತೇಜಿತರಾಗಿರುವ ಚೀನಾ‌ ವಿಜ್ಞಾನಿಗಳು ಮನುಷ್ಯರ ಮೇಲೆ ಈ ಪ್ರಯೋಗ ನಡೆಸಿ ಯಶಸ್ವಿಯಾಗಲು‌ ಕಾತರಿಸುತ್ತಿದ್ದಾರೆಂದು ವರದಿಗಳು ಹೇಳಿವೆ.

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!