Friday, January 21, 2022

ಮುಚ್ಚಿತು ವಿಶ್ವದ ಅತಿ ದೊಡ್ಡ ನಸುಗೆಂಪು ಗಣಿ!

Follow Us

newsics.com
ಸಿಡ್ನಿ: ವಿಶ್ವದ ಅತಿ ದೊಡ್ಡ ನಸುಗೆಂಪು (ಪಿಂಕ್) ಬಣ್ಣದ ವಜ್ರದ ಗಣಿಯಲ್ಲಿನ ವಜ್ರದ ನಿಕ್ಷೇಪ ಖಾಲಿಯಾದ ಹಿನ್ನೆಲೆಯಲ್ಲಿ ಗಣಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ.
ಜಾಗತಿಕ ಗಣಿಗಾರಿಕೆ ಸಂಸ್ಥೆ ರಿಯೋ ಟಿಂಟೋ ಮಂಗಳವಾರ (ನ.3) ಈ ಮಾಹಿತಿ ನೀಡಿದೆ. ಗಣಿಯಲ್ಲಿ ನಸುಗೆಂಪು ವಜ್ರದ ನಿಕ್ಷೇಪ ಖಾಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಗಣಿ ಮುಚ್ಚಲು ಸುಮಾರು ಐದು ವರ್ಷಗಳ ಕಾಲಾವಕಾಶ ತೆಗೆದುಕೊಂಡಿರುವುದಾಗಿ ರಿಯೋ ಹೇಳಿದೆ. ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದ ಕಿಂಬರ್ಲಿ ಪ್ರದೇಶದಲ್ಲಿರುವ ಅರ್ಗೈಲ್ ಗಣಿಯ ಮೂಲಕ ಜಗತ್ತಿನ ಶೇ.90ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ನಸುಗೆಂಪು ಬಣ್ಣದ ವಜ್ರ ಹೊರತೆಗೆಯಲಾಗಿತ್ತು ಎಂದು ವರದಿ ತಿಳಿಸಿದೆ.
1979ರಲ್ಲಿ ಈ ಪ್ರದೇಶದಲ್ಲಿ ಅತ್ಯಪರೂಪದ ವಜ್ರದ ನಿಕ್ಷೇಪ ಪತ್ತೆ ಹಚ್ಚಲಾಗಿತ್ತು. ಸುಮಾರು ನಾಲ್ಕು ವರ್ಷದ ನಂತರ ಆಂಗ್ಲೋ ಆಸ್ಟ್ರೇಲಿಯಾ ಮೂಲದ ಕಂಪನಿ ಗಣಿಗಾರಿಕೆ ಆರಂಭಿಸಿತ್ತು. ಸುಮಾರು 37 ವರ್ಷ ಗಣಿಗಾರಿಕೆಯಲ್ಲಿ ಕೋಟ್ಯಂತರ ಕ್ಯಾರೆಟ್ ನಷ್ಟು ಕಚ್ಚಾ ವಜ್ರ ಹೊರತೆಗೆಯಲಾಗಿತ್ತು. ಭೂಮಿಯನ್ನು ಮೂಲ ವಾರಸುದಾರರಿಗೆ ಮರಳಿಸುವುದಾಗಿ ಗಣಿ ಮ್ಯಾನೇಜರ್ ಆಯಂಡ್ರ್ಯೂ ವಿಲ್ಸತ್ ತಿಳಿಸಿದ್ದಾರೆ.

ಗಣಿ ಪ್ರದೇಶದಲ್ಲಿ ಸಿಕ್ತು ವಜ್ರ; ಕಾರ್ಮಿಕರಿಬ್ಬರು ಈಗ ಲಕ್ಷಾಧೀಶ್ವರರು!

ಆಂಬುಲೆನ್ಸ್’ನಲ್ಲೆ ಪಿಎಸ್‌ಸಿ ಪರೀಕ್ಷೆ ಬರೆದ ಯುವತಿ!

ಬೈಕ್’ಗಳ ಡಿಕ್ಕಿ; ನಾಲ್ವರ ಸಾವು, ಇಬ್ಬರ ಸ್ಥಿತಿ ಗಂಭೀರ

ತೆಂಗಿನಕಾಯಿ ನೀಡಿ ಬೋಧನಾ ಶುಲ್ಕ ಪಾವತಿಸಿ

ಮತ್ತಷ್ಟು ಸುದ್ದಿಗಳು

Latest News

ಹಂತಕರ ಕಣ್ಣಿಗೆ ಖಾರದಪುಡಿ ಎರಚಿ ಪತಿಯ ಪ್ರಾಣ ಉಳಿಸಿದ‌ ಪತ್ನಿ!

newsics.com ಹೈದರಾಬಾದ್‌ : ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಪತ್ನಿ ಖಾರದ ಪುಡಿ ಎರಚಿ ಪತಿಯ ಪ್ರಾಣ ಉಳಿಸಿದ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ...

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನ ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅವರ...

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...
- Advertisement -
error: Content is protected !!