ಮಾಸ್ಕೊ: ಪ್ರಸವ ವೇದನೆಯಿಂದ ನರಳುತ್ತಿದ್ದ ಜಿರಳೆಯೊಂದಕ್ಕೆ ರಷ್ಯಾದ ಸೈಬೀರಿಯಾ ಪ್ರಾಂತ್ಯದ ಕ್ರಾಸ್ನೋಯಾಸ್ಕ್ನಪಶುವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದಾರೆ!
ಜಿರಳೆಗೆ ಒಂದು ಪುಟ್ಟ ಇಂಜೆಕ್ಷನ್ ಹಾಗೂ ಅನಿಲ ವಿಧಾನಗಳ ಮೂಲಕ ತಾತ್ಕಾಲಿಕ ಅರಿವಳಿಕೆ ನೀಡಿ ಇಡೀ ಚೀಲವನ್ನು ಹೊರತೆಗೆದರು. ವೈದ್ಯರು ಶಸ್ತ್ರಚಿಕಿತ್ಸೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.
ಹೊಟ್ಟೆ ಯಲ್ಲಿದ್ದ ಮೊಟ್ಟೆಗಳ ಚೀಲ, ತನ್ನಲ್ಲಿನ ಮೊಟ್ಟೆ ಗಳನ್ನು ಆಚೆ ಬರಲು ಬಿಡದಂತೆ ಅಡ್ಡವಾಗಿದ್ದಿದ್ದು ಗಮನಕ್ಕೆ ಬಂತು. ಹೀಗಾಗಿ, ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತಗೆಯಲು ವೈದ್ಯರು ನಿರ್ಧರಿಸಿದರು.
ದಕ್ಷಿಣ ಅಮೆರಿಕದ ಅರಣ್ಯಗಳಲ್ಲಿರುವ ಸುಮಾರು 8 ಸೆಂ.ಮೀ.ವರೆಗೆ ಬೆಳೆಯಬಲ್ಲ ಈ ಜಿರಳೆಯನ್ನು ಕ್ರಾಸ್ನೋಯಾಸ್ಕ್ ನಗರದ ವ್ಯಕ್ತಿಯೊಬ್ಬರು ತಂದು, ಅದಕ್ಕೆ ‘ಆರ್ಚಿಮ್ಯಾಂಡ್ರಿಟಾ’ ಎಂದು ಹೆಸರಿಟ್ಟಿದ್ದರು.
ಆಪರೇಷನ್ ಮೂಲಕ ಜಿರಳೆ ಹೆರಿಗೆ!
Follow Us