NEWSICS.COM
ಬಾಲಿ: ಆರ್ಥಿಕ ಕುಸಿತದ ಕಾರಣ ಅನೇಕ ವಿದ್ಯಾರ್ಥಿಗಳು ಬೋಧನಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಈ ಕಾರಣದಿಂದ ಬಾಲಿ ದೇಶದ ಹಾಸ್ಪಿಟಾಲಿಟಿ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಶುಲ್ಕವನ್ನು ತೆಂಗಿನಕಾಯಿ ಮತ್ತು ಇತರ ನೈಸರ್ಗಿಕ ಉತ್ಪನ್ನಗಳನ್ನು ನೀಡುವುದರ ಮೂಲಕ ಪಾವತಿಸಲು ಅವಕಾಶ ಮಾಡಿಕೊಟ್ಟಿದೆ.
ವೀನಸ್ ಒನ್ ಟೂರಿಸಂ ಅಕಾಡೆಮಿ ತಮ್ಮ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ ಎಂದು ನೈಸರ್ಗಿಕ ಕಚ್ಚಾ ವಸ್ತುಗಳ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಿದೆ.
ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ , ನಾವು ಕೂಡ ಹೊಂದಿಕೊಳ್ಳುವ ನೀತಿಯನ್ನು ಅಳವಡಿಸಿಕೊಂಡಿದ್ದೇವೆ. ಅದಕ್ಕಾಗಿಯೇ ಶುದ್ಧ ತೆಂಗಿನ ಎಣ್ಣೆಯನ್ನು ಉತ್ಪಾದಿಸುತ್ತೇವೆ, ಆದ್ದರಿಂದ ವಿದ್ಯಾರ್ಥಿಗಳು ತೆಂಗಿನಕಾಯಿ ತರುವ ಮೂಲಕ ತಮ್ಮ ಬೋಧನಾ ಶುಲ್ಕ ಪಾವತಿಸಬಹುದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.