newsics.com
ಲಂಡನ್: ಸಮುದ್ರದಾಳದಲ್ಲಿ ಅತ್ಯಂತ ಅಪರೂಪವಾಗಿ ಕಾಣಸಿಗುವ “ಬ್ಲ್ಯಾಂಕೆಟ್ ಆಕ್ಟೋಪಸ್’ ಈಗ ಸಂಶೋಧಕರ ಕಣ್ಣಿಗೆ ಬಿದ್ದಿದೆ.
ನೀರಿನಲ್ಲಿ ಆಕ್ಟೋಪಸ್ ಮೈ ಬಳುಕಿಸುತ್ತಾ ಕುಣಿದಾಡುತ್ತಿದ್ದ ದೃಶ್ಯವು ಸೆರೆಯಾಗಿದೆ.
ಗ್ರೇಟ್ ಬ್ಯಾರಿಯರ್ ರೀಫ್ ನ ಲೇಡಿ ಎಲಿಯಟ್ ದ್ವೀಪದಲ್ಲಿ ಸಾಗರಜೀವವಿಜ್ಞಾನಿ ಜೆಸಿಂಟಾ ಶಾಕ್ಲಿಟನ್ ಅವರು ಇದನ್ನು ಪತ್ತೆಹಚ್ಚಿದ್ದಾರೆ.
ಅದನ್ನು ನೋಡಿದಾಗ ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ’ ಎಂದು ಜೆಸಿಂಟಾ ಹೇಳಿದ್ದಾರೆ.