newsics.com
ಬಾಂಗ್ಲಾದೇಶ: ದುರ್ಗಾ ಪೂಜೆ ವೇಳೆ ಕೋಮು ಗಲಭೆ ಸಂಭವಿಸಿ 3 ಜನ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಇಲ್ಲಿನ ಚಂದ್ ಪುರದ ಹಾಜಿಗಂಜ್ ಅಪ್ಜಿಲ್ಲಾ, ಚತ್ತೋಗ್ರಾಂನ ಬಾಂಶ್ ಖಲಿ ಮತ್ತು ಕಾಕ್ಸ್ ಬಜಾರ್ ನ ಪೆಕುವಾದಲ್ಲಿ ಕೋಮು ಗಲಭೆ ನಡೆದಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಸಂಭ್ರಮದಿಂದ ದುರ್ಗಾ ಪೂಜೆ ಆಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಂಡಾಲ್ ನಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ್ದು, ಇದು ಗಲಭೆಗೆ ಕಾರಣವಾಗಿದೆ.
ದುರ್ಗಾ ಪೂಜೆಯ ಮಂಟಪಕ್ಕೆ ಆಗಮಿಸಿದ ಕೆಲ ಕಿಡಿಗೇಡಿಗಳು ಗಲಭೆ ಸೃಷ್ಟಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಿಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.