newsics.com
ಬೆಜ್ರಿಲ್: ಮಾರಕ ಕೊರೋನಾ ಬ್ರೆಜಿಲ್ ನಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕಳೆದ 24 ಗಂಟೆಯಲ್ಲಿ ಬ್ರೆಜಿಲ್ ನಲ್ಲಿ ಕೊರೋನಾ 4195 ಮಂದಿಯ ಪ್ರಾಣ ಅಪಹರಿಸಿದೆ. ಇದು ಬ್ರೆಜಿಲ್ ನಲ್ಲಿ ಆತಂಕ ಸೃಷ್ಟಿಸಿದೆ.
ಇಡೀ ದೇಶ ಆತಂಕ ಎದುರಿಸುತ್ತಿದೆ ಎಂದು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಮಿಗುಯೆಲ್ ನಿಕೋಲೈಸ್ ಹೇಳಿದ್ದಾರೆ.
ಅಮೆರಿಕದ ಬಳಿಕ ಕೊರೋನಾದಿಂದ ಅತೀ ಹೆಚ್ಚು ಜನರು ಬ್ರೆಜಿಲ್ ನಲ್ಲಿ ಮೃತಪಟ್ಟಿದ್ದಾರೆ. ಬ್ರೆಜಿಲ್ ನಲ್ಲಿ ಇದುವರೆಗೆ 3, 37,00 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.