ವಾಷಿಂಗ್ಟನ್: ಮಾರಕ ಕೊರೋನಾಕ್ಕೆ ಬ್ರೆಜಿಲ್ ನಲ್ಲಿ ಬಲಿಯಾದವರ ಸಂಖ್ಯೆ 90000 ದಾಟಿದೆ. ರೋಗ ನಿಯಂತ್ರಿಸಲು ತೆಗೆದುಕೊಳ್ಳಲಾದ ಕ್ರಮಗಳು ಇದುವರೆಗೆ ನಿರೀಕ್ಷಿತ ಫಲ ನೀಡಿಲ್ಲ. ಇದೇ ವೇಳೆ ವಿಮಾನದಲ್ಲಿ ಬರುವ ಪ್ರವಾಸಿಗರ ಮೇಲಿನ ನಿರ್ಬಂಧವನ್ನು ಬ್ರೆಜಿಲ್ ತೆಗೆದುಹಾಕಿದೆ. ವಿಮಾನಗಳ ಮೂಲಕ ವಿದೇಶಿ ಪ್ರವಾಸಿಗರ ಆಗಮನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಮಧ್ಯೆ ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 1267 ಮಂದಿ ಸಾವನ್ನಪ್ಪಿದ್ದಾರೆ. ಪ್ಲೋರಿಡಾದಲ್ಲಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಕಳೆದ 10 ದಿನಗಳಲ್ಲಿ ಅಮೆರಿಕದಲ್ಲಿ ಹತ್ತು ಸಾವಿರ ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ