Monday, April 12, 2021

ಕೋವಿಡ್ -19 ಎಫೆಕ್ಟ್- ಕೊಲ್ಲಿ ವರನಿಗೆ ಕುಸಿದ ಬೇಡಿಕೆ, ಕುಸಿಯುತ್ತಿರುವ ಆರ್ಥಿಕತೆ

ರಿಯಾದ್: ಕೊರೋನಾ ದುಬೈ ಸೇರಿದಂತೆ ಸಂಯುಕ್ತ ಅರಬ್ ಎಮಿರೇಟ್ಸ್ ನ ಆರ್ಥಿಕತೆ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ.  ತೈಲ ಸಂಪನ್ನ ಕೊಲ್ಲಿ ರಾಷ್ಟ್ರಗಳಲ್ಲಿ ಮುಂದಿನ ದಿನಗಳಲ್ಲಿ  ಭಾರಿ ನೌಕರಿ ಕಡಿತದ ಮುನ್ಸೂಚನೆ ದೊರೆಯಲಾರಂಭಿಸಿದೆ. ದುಬೈ ಚೇಂಬರ್ ಆಫ್ ಕಾಮರ್ಸ್ ನಡೆಸಿದ ಸಮೀಕ್ಷೆ ಬೆಚ್ಚಿ ಬೀಳಿಸುವ ಅಂಶಗಳನ್ನು ಬಯಲುಮಾಡಿದೆ. 1228ಕ್ಕೂ ಹೆಚ್ಚು ಸಿಇಒ ಅಭಿಪ್ರಾಯ ಸಂಗ್ರಹಿಸಿರುವ ಸಮೀಕ್ಷೆ ಭಾರೀ ಉದ್ಯೋಗ ನಷ್ಟ ಹತ್ತಿರದಲ್ಲಿದೆ ಎಂದು ಎಚ್ಚರಿಕೆ ನೀಡಿದೆ. ಮುಂಬರುವ ಆರು ತಿಂಗಳಲ್ಲಿ ಮೂರನೆ ಎರಡರಷ್ಟು ಉದ್ಯಮಗಳು ತಮ್ಮ ಚಟುವಟಿಕೆ ಸ್ಥಗಿತಗೊಳಿಸುವ ಸಾಧ್ಯತೆಯನ್ನು ಸಮೀಕ್ಷೆ ಸೂಚಿಸಿದೆ.  ಶೇಕಡ 27 ಮಂದಿ ಮುಂದಿನ ತಿಂಗಳೊಳಗೆ ವ್ಯಾಪಾರ ಕಳೆದುಕೊಳ್ಳುವ ಭೀತಿ ವ್ಯಕ್ತಪಡಿಸಿದರೆ, ಶೇಕಡ 43 ಮಂದಿ ನೌಕರಿ ಕಳೆದುಕೊಳ್ಳುವ ಭಯ ಎದುರಿಸುತ್ತಿದ್ದಾರೆ.  ಪರಿಸ್ಥಿತಿ ಗಂಭೀರ ಹಂತ ತಲುಪಿದರೆ ಮುಂದಿನ ಆರು ತಿಂಗಳಲ್ಲಿ ಕೊಲ್ಲಿ ರಾಷ್ಟ್ರದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆಯಿದೆ.  ಶೇಕ಼ಡ 70ರಷ್ಟು ಉದ್ಯಮದ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಲಿದೆ. ಇದೇ ವೇಳೆ ಕೊಲ್ಲಿ ಬಿಕ್ಕಟ್ಟು ರಾಜ್ಯದ ಸಾಮಾಜಿಕ ವಲಯದ ಮೇಲೂ ಪರಿಣಾಮ ಬೀರಿದೆ. ಕೊಲ್ಲಿ ವರನ ಬೇಡಿಕೆ  ಮದುವೆ ಮನೆಯಂಗಳದಲ್ಲಿ ಕುಸಿದಿದೆ. ಆರ್ಥಿಕ ಅಭದ್ರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಕರಾವಳಿ ತೀರದಲ್ಲಿ ಸಾವಿರಾರು ದೇವಸ್ಥಾನಗಳು , ದೈವಸ್ಥಾನಗಳ  ಅಭಿವೃದ್ದಿಯ ಹಿಂದೆ ಕೊಲ್ಲಿ ರಾಷ್ಟ್ರಗಳ ಆರ್ಥಿಕ ಶಕ್ತಿ ಇದ್ದು, ಮುಂಬರುವ ದಿನಗಳಲ್ಲಿ  ಪರ್ಯಾಯ ಆರ್ಥಿಕ ಮಾರ್ಗಗಳನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!