♦ 51 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ಸಿಂಗಾಪುರ: ಭಾರತದಿಂದ ಆಗಮಿಸಿದ ಒಂದು ವರ್ಷದ ಬಾಲಕನನ್ನು ಸೇರಿ ಸಿಂಗಾಪುರದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 51,197 ಕ್ಕೆ ಏರಿಕೆಯಾಗಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ.
ಮಂಗಳವಾರ ಸಿಂಗಾಪುರದಲ್ಲಿ ಒಟ್ಟು 359 ಕೇಸ್’ಗಳು ದಾಖಲಾಗಿದ್ದು ಇದರಲ್ಲಿ ಬಹುತೇಕ ವಿದೇಶದಿಂದ ಸಿಂಗಾಪುರಕ್ಕೆ ಬಂದವರೇ ಆಗಿದ್ದಾರೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ವಿದೇಶಗಳಿಂದ ಸಿಂಗಾಪುರಕ್ಕೆ ಉದ್ಯೋಗಕ್ಕಾಗಿ ಬಂದವರು ಹಾಗೂ ಅವರ ಕುಟುಂಬಸ್ಥರು ಸೋಂಕಿಗೆ ಒಳಗಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 51 ಸಾವಿರದ ಗಡಿ ದಾಟಿದೆ.
ವಿದೇಶದಿಂದ ಆಗಮಿಸಿದ ಒಟ್ಟು 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜುಲೈ 12, 14 ರಂದು ಇಂಡಿಯಾದಿಂದ ಸಿಂಗಾಪುರಕ್ಕೆ ಆಗಮಿಸಿದ ಒಬ್ಬ ಬಾಲಕ ಸೇರಿದಂತೆ ಇಬ್ಬರಲ್ಲಿ ಸೋಂಕು ತಗುಲಿದೆ. ಇನ್ನು 13 ಜನರ ಪೈಕಿ ಇಬ್ಬರು ಸಿಂಗಾಪುರ ನಿವಾಸಿಗಳಾಗಿದ್ದು , ಉಳಿದ 11 ಜನರು ಇಂಡಿಯಾ, ಫಿಲಿಫೈನ್ಸ್ ದೇಶದಲ್ಲಿ ವರ್ಕ್ ಮಾಡುವ ಪರ್ಮಿಶನ್ ಹೊಂದಿದವರಾಗಿದ್ದಾರೆ.
ಸಿಂಗಾಪುರ ಗೃಹ ಮಂತ್ರಾಲಯದ ಪ್ರಕಾರ ಸಿಂಗಾಪುರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದ್ದು, ಆದರೆ ಕಳೆದ ಒಂದು ವಾರದಲ್ಲಿ ಕಮ್ಯೂನಿಟಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
179 ಸೋಂಕಿತರು ಹಾಸ್ಪಿಟಲ್’ನಲ್ಲಿದ್ದರೆ, ಇದುವರೆಗೂ 27 ಜನರು ಸಾವನ್ನಪ್ಪಿದ್ದಾರೆ. 45,677 ಜನರು ಸೋಂಕಿನಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಎಂದು ಸಿಂಗಾಪುರ ಸಚಿವಾಲಯ ವರದಿ ಮಾಡಿದೆ.