ವಾಷಿಂಗ್ಟನ್: ಕೊರೋನಾ ವಿಚಾರವಾಗಿ ಮೈಕ್ರೋಸಾಫ್ಟ್ ಕಂಪೆನಿಯ ಸಹ- ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮಸ್ಕ್, ಕೊರೋನಾದಿಂದ ಸಾವನ್ನಪ್ಪಿರುವವರ ಸಂಖ್ಯೆಯನ್ನು ವಾಸ್ತವಕ್ಕಿಂತ ಹೆಚ್ಚಾಗಿ ಹೇಳಲಾಗುತ್ತಿದೆ. ಅಲ್ಲದೆ, ಅಮೆರಿಕದಲ್ಲಿ ಕೋವಿಡ್ ಲಾಕ್‌ಡೌನ್ ಅಗತ್ಯವಿರಲಿಲ್ಲ ಎಂದಿದ್ದರು. ಕೊರೋನಾ ಎದುರಿಸಲು ಅಮೆರಿಕ ಕೈಗೊಂಡಿರುವ ಕ್ರಮಗಳು ಬಲಪಂಥೀಯ ಧೋರಣೆ ಹೊಂದಿವೆ ಎಂದು ಟೀಕಿಸಿದ್ದರು.
ಸಿಎನ್‌ಬಿಸಿ ವಾಹಿನಿಯ ಸ್ಕ್ವಾಕ್ ಬಾಕ್ಸ್ ಟಾಕ್‌ಷೋನಲ್ಲಿ ಭಾಗವಹಿಸಿದ್ದ ಗೇಟ್ಸ್, ಮಸ್ಕ್ ಅವರ ಹೇಳಿಕೆಯನ್ನು ಖಂಡಿಸಿ, ಎಲಾನ್ ಮಸ್ಕ್ ಅವರೇ, ನೀವು ನಿಮ್ಮ ಗಮನವನ್ನು ವಿದ್ಯುತ್ ಕಾರು ತಯಾರಿಕೆಯಲ್ಲಿ ಹಾಗೂ ರಾಕೆಟ್ ತಯಾರಿಕೆಯ ಕಡೆಗೆ ಮೀಸಲಿರಿಸಿ. ಆದರೆ, ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ನೀವು ಬಾಯಿಗೆ ಬಂದಂತೆ ಮಾತಾಡಬೇಡಿ’ ಎಂದು ಹೇಳಿದ್ದಾರೆ. ಅಲ್ಲದೆ, “ನಿಮ್ಮಂಥ (ಮಸ್ಕ್) ಗಣ್ಯರು ಹೇಳುವ ಒಂದು ಹೇಳಿಕೆ, ಮಾಧ್ಯಮಗಳ ಮೂಲಕ ವೇಗವಾಗಿ ಹರಡುತ್ತದೆ. ಅದರಲ್ಲೂ
ನಿಮ್ಮಿಂದ ನಿಮ್ಮ ಅರಿವಿಗೆ ಬರದಂತೆ ಹರಡುವ ಸುಳ್ಳುಗಳು ವಾಸ್ತವತೆಯನ್ನೂ ಮೀರಿಸುತ್ತವೆ’ ಎಂದು ಹೇಳಿದ್ದಾರೆ.
ಕೊರೋನಾ ವಿಚಾರ; ಬಿಲ್ ಗೇಟ್ಸ್- ಎಲಾನ್ ಮಸ್ಕ್ ಮಧ್ಯೆ ಮಾತಿನ ಚಕಮಕಿ
Follow Us