Tuesday, March 2, 2021

ಇಸ್ರೇಲ್’ನಲ್ಲಿ ಮೂರನೇ ಬಾರಿಗೆ ಲಾಕ್’ಡೌನ್; ಭಾನುವಾರದಿಂದ ಜಾರಿ

newsics.com
ಜೆರುಸಲೆಂ: ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಸ್ರೇಲ್ ಮೂರನೇ ಬಾರಿಗೆ ರಾಷ್ಟ್ರವ್ಯಾಪಿ ಲಾಕ್ ಡೌನ್ ಗೆ ಒಳಗಾಗುತ್ತಿದೆ.
ಇದೇ ಭಾನುವಾರದಿಂದ (ಡಿ.27) ಹದಿನಾಲ್ಕು ದಿನಗಳ‌ ಅವಧಿಗೆ ಇಸ್ರೇಲ್’ನಾದ್ಯಂತ ಮೂರನೇ ಬಾರಿಗೆ ಲಾಕ್ ಡೌನ್ ವಿಧಿಸಲಾಗುತ್ತಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಲಾಕ್ ಡೌನ್ ನಿರ್ಬಂಧಗಳು ಭಾನುವಾರ ಸಂಜೆ 5ಗಂಟೆಯಿಂದ ಜಾರಿಗೆ ಬರಲಿದ್ದು, ಇದು ಕನಿಷ್ಠ 14 ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ. ಆದರೆ ಲಾಕ್‌ಡೌನ್‌ ಘೋಷಣೆ ಅಂತಿಮಗೊಳ್ಳಲು ಕ್ಯಾಬಿನೆಟ್ ಅನುಮೋದನೆ ಬಾಕಿ ಇದೆ ಎಂದು ನೆತನ್ಯಾಹು ಕಚೇರಿಯ ಹೇಳಿಕೆ ತಿಳಿಸಿದೆ.
ಕೊರೋನಾ ವೈರಸ್ ಹೊಸ ರೂಪಾಂತರವು ಇಸ್ರೇಲ್ ದೇಶದಲ್ಲಿ ಹೆಚ್ಚು ಹರಡುತ್ತಿದೆ.
ಬ್ರಿಟನ್‌ನಿಂದ ಹಿಂದಿರುಗಿದ ಮೂರು ಜನರಲ್ಲಿ ಈ ಸೋಂಕು ಕಂಡುಬಂದಿದೆ.
ಇಸ್ರೇಲ್‌ನಲ್ಲಿ 3.85 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 3,150ಕ್ಕೂ ಹೆಚ್ಚು ದಾಖಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಮೈಸೂರಿನ ಸುಧಾ ಹೆಗಡೆಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ

newsics.com ಮೈಸೂರು: ಮೈಸೂರಿನ ಸುಧಾ ಹೆಗಡೆ ಅವರಿಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಬ್ಯುಸಿನೆಸ್ ಬೈ ಬ್ರಾಹ್ಮಿನ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ 'ಗೆಲುವಿನೆಡೆಗೆ' ಎಂಬ ನಾಟಕದ ಅಭಿನಯಕ್ಕೆ...

150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ: ಕಂಟೈನ್’ಮೆಂಟ್ ವಲಯವಾದ ಧರ್ಮಶಾಲೆ

newsics.com ಹಿಮಾಚಲ‌ಪ್ರದೇಶ: ಹಿಮಾಚಲ ಪ್ರದೇಶದ ಗ್ಯುಟೊ ತಾಂತ್ರಿಕ ಮೊನೆಸ್ಟ್ರಿಯ ಧರ್ಮಶಾಲೆಯ 150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಶಾಲೆಯನ್ನು ಕಂಟೈನ್'ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಒಬ್ಬ ಸನ್ಯಾಸಿಯನ್ನು...

ನಾಟಕವಾಯ್ತು ಭೈರಪ್ಪನವರ ‘ಪರ್ವ’ ಕಾದಂಬರಿ; ಮಾ.12ರಂದು ಮೊದಲ ಪ್ರದರ್ಶನ

newsics.com ಮೈಸೂರು: ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರ ಜನಪ್ರಿಯ ಮೇರುಕೃತಿ 'ಪರ್ವ' ಈಗ ಏಳೂವರೆ ಗಂಟೆಗಳ ನಾಟಕವಾಗಿ ರೂಪುಗೊಂಡಿದೆ.ಮಹಾಭಾರತದ ಕಥಾವಸ್ತುವನ್ನು ವೈಚಾರಿಕ ದೃಷ್ಟಿಕೋನದಿಂದ 'ಪರ್ವ'ದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ...
- Advertisement -
error: Content is protected !!