newsics.com
ವಾಷಿಂಗ್ಟನ್: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ವೈರಸ್ ಮನುಷ್ಯನ ಸೃಷ್ಟಿ ಎಂದು ಅಮೆರಿಕದ ಸಂಶೋಧಕರೊಬ್ಬರು ಬಹಿರಂಗಪಡಿಸಿದ್ದಾರೆ. ವುಹಾನ್ ಪ್ರಯೋಗಾಲಯದಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದ ಆಂಡ್ರ್ಯೂ ಹಫ್ ಈ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.
ಚೀನಾ ಸರ್ಕಾರದ ನಿಯಂತ್ರಣದಲ್ಲಿರುವ ವುಹಾನ್ ಪ್ರಯೋಗಾಲಯದಲ್ಲಿ ಆಂಡ್ರ್ಯೂ ಹಫ್ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದರು.
ಎರಡು ವರ್ಷಗಳ ಹಿಂದೆ ವುಹಾನ್ ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿತ್ತು ಎಂದು ಹಫ್ ಹೇಳಿದ್ದಾರೆ. ಕೊರೋನಾ ಮಾನವ ಸೃಷ್ಟಿ ಎಂಬ ಬಗ್ಗೆ ಈ ಹಿಂದೆ ಕೂಡ ಸಂಶಯ ವ್ಯಕ್ತಪಡಿಸಲಾಗಿತ್ತು.
ಬ್ರಿಟನ್ ಮತ್ತು ಅಮೆರಿಕದ ಪತ್ರಿಕೆಗಳು ಹಫ್ ಹೇಳಿಕೆ ಆಧರಿಸಿ ವಿಶೇಷ ವರದಿ ಪ್ರಕಟಿಸಿವೆ