Saturday, April 17, 2021

ಶಾಲೆ ಬಾಗಿಲು ತೆರೆದು ಚಿಣ್ಣರಿಗೆ ಸೋಂಕು ಹರಡಿಸಿದ ಫ್ರಾನ್ಸ್!

ಕಳೆದ‌ ಒಂದು ವಾರದ ಹಿಂದೆ ಶಾಲಾ ಕಾಲೇಜುಗಳನ್ನು ಪುನಾರಂಭ ಮಾಡಿದ ಫ್ರಾನ್ಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಫ್ರಾನ್ಸ್ ನಲ್ಲಿ ಒಂದೇ ವಾರದಲ್ಲಿ ಶಾಲೆಗೆ ತೆರಳಿದ 70 ಕ್ಕೂ ಹೆಚ್ಚು ಮಕ್ಕಳು ಕೊರೋನಾ ಸೋಂಕಿತರಾಗಿದ್ದಾರೆ.
ಕಳೆದ ಸೋಮವಾರದಿಂದ‌ ಫ್ರಾನ್ಸ್‌ ಸರ್ಕಾರ ಶಾಲೆಗಳ ಬಾಗಿಲು ತೆರೆದಿತ್ತು. ಈ ಹಿನ್ನೆಲೆಯಲ್ಲಿ ಅಂದಾಜು 1.5 ಲಕ್ಷ‌ ಮಕ್ಕಳು ಶಾಲೆಗಳತ್ತ‌ ಮುಖ ಮಾಡಿದ್ದರು. ಈ ಪೈಕಿ ಇದೀಗ 70ಕ್ಕೂ ಹೆಚ್ಚು ಮಕ್ಕಳು ಕೊರೋನಾಕ್ಕೆ ತುತ್ತಾಗಿದ್ದಾರೆ.
40 ಸಾವಿರಕ್ಕೂ ಅಧಿಕ ಫ್ರೀ-ಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳನ್ನು ಫ್ರಾನ್ಸ್ ಸರ್ಕಾರ ತೆರೆದಿತ್ತು.
ಆದರೆ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದೆ. ವರ್ಕ್ ಫ್ರಂ ಹೋಂನಲ್ಲಿದ್ದ ಪೋಷಕರ ಒತ್ತಾಯದ ಮೇರೆಗೆ ಫ್ರಾನ್ಸ್ ಸರ್ಕಾರ ಶಾಲೆಗಳನ್ನು ಪುನಾರಂಭಿಸುವ ತೀರ್ಮಾನಕ್ಕೆ ಬಂದಿತ್ತು. ಆದರೆ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದಂತೆ ಆ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ. ಹೀಗಾಗಿ ಇದುವರೆಗೂ ಉತ್ತರ ಫ್ರಾನ್ಸ್ ನಲ್ಲಿ 7 ಶಾಲೆಗಳನ್ನು ಮುಚ್ಚಲಾಗಿದೆ‌.
ಇದುವರೆಗೂ ಫ್ರಾನ್ಸ್ ನಲ್ಲಿ 1 ಲಕ್ಷದ 42 ಸಾವಿರ ಜನರಿಗೆ ಸೋಂಕು ತಗುಲಿದ್ದು ಈ ಪೈಕಿ 28 ಸಾವಿರ ಜನರು ಸಾವನ್ನಪ್ಪಿದ್ದಾರೆ‌.
ತರಾತುರಿಯಲ್ಲಿ ಶಾಲೆ‌ ಆರಂಭಿಸಿದ ಫ್ರಾನ್ಸ್ ವರ್ತನೆ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ...

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು,...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...
- Advertisement -
error: Content is protected !!